×
Ad

ಕೋಟೆಕಾರು: ಕೊಂಡಾಣ ಕ್ಷೇತ್ರದ ಸಿಸಿ ಕ್ಯಾಮೆರಾ ಕಳವು; ಆರೋಪಿಯ ಬಂಧನ

Update: 2024-04-06 13:39 IST

ಉಳ್ಳಾಲ: ಕೋಟೆಕಾರು ಗ್ರಾಮದ ಕೊಂಡಾಣ ಕ್ಷೇತ್ರದ ಭಂಡಾರ ಮನೆ ಧ್ವಂಸ ಪ್ರಕರಣದ ಬೆನ್ನಲ್ಲೇ ಕ್ಷೇತ್ರಕ್ಕೆ ಅಳವಡಿಸಲಾಗಿದ್ದ ಆರು ಸಿಸಿ ಕ್ಯಾಮೆರಾಗಳನ್ನು ಕಳವುಗೈಯಲಾದ ಘಟನೆ ನಡೆದಿದ್ದು, ಈ ಬಗ್ಗೆ ಪ್ರಕರಣ ದಾಖಲಿಸಿದ ಉಳ್ಳಾಲ ಪೊಲೀಸರು ಆರೋಪಿಯನ್ನು ಬಂಧಿಸಿ ಸಿಸಿ ಕ್ಯಾಮೆರಾ ಗಳನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತ ಆರೋಪಿಯನ್ನು ಬೀರಿ ಕೊಂಡಾಣ ನಿವಾಸಿ ಶುಭಾಶ್ ಚಂದ್ರ (37) ಎಂದು ಗುರುತಿಸಲಾಗಿದೆ.

ಕ್ಷೇತ್ರದ ಸಿಸಿ ಅಳವಡಿಸಲಾದ ಕ್ಯಾಮೆರಾಗಳು ಕಳವಾಗಿರುವ ಘಟನೆ ಗುರುವಾರ ಬೆಳಕಿಗೆ ಬಂದಿತ್ತು. ಈ ಬಗ್ಗೆ ಕೋಟೆಕಾರು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಆನಂದ್ ಅವರು‌ ಉಳ್ಳಾಲ ಠಾಣೆಗೆ ದೂರು ನೀಡಿದ್ದರು.

ಕ್ಯಾಮೆರಾ ಕಳವುಗೈದ ಆರೋಪಿಯ ಚಹರೆ ಕೊಂಡಾಣ ಕ್ಷೇತ್ರದ ಕಚೇರಿಯಲ್ಲಿದ್ದ ಸಿಸಿ ಕ್ಯಾಮೆರದ ಡಿವಿಆರ್ ನಲ್ಲಿ ಸೆರೆಯಾಗಿತ್ತು. ಇದನ್ನು ಆಧರಿಸಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿ ಮಾನಸಿಕ ರೋಗಿಯಾಗಿದ್ದು ಆತನನ್ನು ಜಿಲ್ಲಾಸ್ಪತ್ರೆ ಗೆ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News