×
Ad

ಮಂಗಳೂರು| ಚಲಿಸುತ್ತಿದ್ದ ಕಾರಿಗೆ ಬೆಂಕಿ

Update: 2024-11-10 23:05 IST

ಮಂಗಳೂರು : ನಗರದ ಲೇಡಿಹಿಲ್‌ನ ನಾರಾಯಣಗುರು ವೃತ್ತದ ಬಳಿಯ ಪೆಟ್ರೋಲ್ ಬಂಕ್ ಸಮೀಪ ಮಾರುತಿ 800 ಕಾರಿಗೆ ಬೆಂಕಿ ಹೊತ್ತಿಕೊಂಡು ಧಗ ಧಗನೇ ಉರಿದ್ದು, ಕಾರಿನಲ್ಲಿದ್ದ ಮೂವರು ತಕ್ಷಣವೇ ಕೆಳಕ್ಕಿಳಿದು ಅಪಾಯದಿಂದ ಪಾರಾಗಿರುವ ಘಟನೆ ವರದಿಯಾಗಿದೆ

ಕಾರು ಬಜ್ಪೆ ಆದ್ಯಪಾಡಿಯ ಪಾರ್ಶ್ವನಾಥ ಎಂಬವರಿಗೆ ಸೇರಿದ್ದಾಗಿದೆ. ಅವರು ಪೆಟ್ರೋಲ್ ಹಾಕಿಸಲಿಕ್ಕೆ ಲೇಡಿಹಿಲ್‌ನ ನಾರಾಯಣ ಗುರು ವೃತ್ತದ ಸಮೀಪದ ಪೆಟ್ರೋಲ್ ಬಂಕ್‌ಗೆ ಬರುತ್ತಿದ್ದರು. ಪೆಟ್ರೋಲ್ ಬಂಕ್ ಒಳಗೆ ಪ್ರವೇಶಿಸುವ ಮುನ್ನವೇ ರಸ್ತೆಯಲ್ಲೇ ಶಾರ್ಟ್‌ಸರ್ಕೀಟ್‌ನಿಂದ ಕಾರಿಗೆ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗಿದೆ

ಸಮೀಪದಲ್ಲಿದ್ದ ಪೆಟ್ರೋಲ್ ಬಂಕ್‌ನ ಸಿಬ್ಬಂದಿ ತಮ್ಮಲ್ಲಿದ್ದ ಅಗ್ನಿಶಾಮಕ ಸಾಧನಗಳನ್ನು ಬಳಸಿ ಬೆಂಕಿಯನ್ನು ಹತೋಟಿಗೆ ತಂದಿದ್ದರು. ಅಷ್ಟರಲ್ಲೇ ಕದ್ರಿ ಅಗ್ನಿ ಶಾಮಕ ಹಾಗೂ ತುರ್ತುಸೇವೆಗಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಬೆಂಕಿಯನ್ನು ಪೂರ್ತಿ ಯಾಗಿ ಹತೋಟಿಗೆ ತರುವಲ್ಲಿ ಯಶಸ್ವಿಯಾದರು ಎಂದು ತಿಳಿದುಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News