×
Ad

ಮಂಗಳೂರು | BITಯಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ʼಬಿಲ್ಡಿಂಗ್ ವಿನ್ನಿಂಗ್ ಮೈಂಡ್ಸೆಟ್ʼ ಸ್ಪೂರ್ತಿದಾಯಕ ಕಾರ್ಯಕ್ರಮ

Update: 2025-11-22 00:18 IST

ಮಂಗಳೂರು: ಬ್ಯಾರೀಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಬಿಐಟಿ)ಯಲ್ಲಿ ಇನ್ಸ್ಟಿಟ್ಯೂಟ್ ಆಫ್ ರಿಸರ್ಚ್ ಆಂಡ್ ಡೆವೆಲಪ್ಮೆಂಟ್ ಸೆಲ್, ಡಿಪಾರ್ಟ್ಮೆಂಟ್ ಆಫ್ ಬೇಸಿಕ್ ಸೈನ್ಸ್ ಜಂಟಿಯಾಗಿ ಶುಕ್ರವಾರ ಪ್ರಥಮ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ʼಬಿಲ್ಡಿಂಗ್ ವಿನ್ನಿಂಗ್ ಮೈಂಡ್ಸೆಟ್ʼ ಸ್ಪೂರ್ತಿದಾಯಕ ಕಾರ್ಯಕ್ರಮ ಆಯೋಜಿಸಲಾಗಿತ್ತು .

ಇನ್‌ಯೂನಿಟಿ ಎಲ್‌ಎಲ್‌ಪಿಯ ಸಿಇಒ ಮತ್ತು ಸಹ-ಸಂಸ್ಥಾಪಕರಾದ ಜಾನ್ಸನ್ ಟೆಲ್ಲಿಸ್ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ನಾಯಕತ್ವ, ಉದ್ಯಮಶೀಲತೆ ಮತ್ತು ಸಮಾಜಮುಖಿ ನವೋದ್ಯಮ ಕ್ಷೇತ್ರಗಳಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಂಡರು. ಸ್ವಯಂ-ಶಿಸ್ತು, ಸಕಾರಾತ್ಮಕ ಮನೋಭಾವ, ಹಿನ್ನಡೆಗಳನ್ನು ಪಾಠವಾಗಿ ಪರಿಗಣಿಸುವ ಧೋರಣೆ ಹಾಗೂ ಶ್ರೇಷ್ಠತೆಯತ್ತ ನಿರಂತರ ಪ್ರಯತ್ನಗಳು ವಿಜೇತರ ಮನೋಭಾವದ ಆಧಾರ ಎಂದು ಅವರು ವಿದ್ಯಾರ್ಥಿಗಳಿಗೆ ಹೇಳಿದರು.

ಅನುಭವಗಳು ಮತ್ತು ನಿಜ ಜೀವನದ ಉದಾಹರಣೆಗಳ ಮೂಲಕ ವಿದ್ಯಾರ್ಥಿಗಳು ಸವಾಲುಗಳನ್ನು ಸ್ವೀಕರಿಸಲು, ತಮ್ಮ ಸಾಮರ್ಥ್ಯದ ಮೇಲೆ ನಂಬಿಕೆ ಇಡಲು ಟೆಲ್ಲಿಸ್ ಪ್ರೋತ್ಸಾಹಿಸಿದರು.

ಕಾರ್ಯಕ್ರಮದಲ್ಲಿ ಇನ್ಸ್ಟಿಟ್ಯೂಟ್ ಆಫ್ ರಿಸರ್ಚ್ ಆಂಡ್ ಡೆವೆಲಪ್ಮೆಂಟ್ ಸೆಲ್ ಮುಖ್ಯಸ್ಥ ಡಾ.ಇಮ್ರಾನ್ ಮೊಕಾಶಿ, ಕೇಂದ್ರದ ಸಂಯೋಜಕ ಡಾ.ಸಂದೀಪ್ ನಂಬಿಯಾರ್ ಎಸ್ ಮತ್ತು ಬೇಸಿಕ್ ಸೈನ್ಸ್ ವಿಭಾಗದ ಮುಖ್ಯಸ್ಥ ಡಾ.ಅಂಜುಮ್ ಖಾನ್ ಉಪಸ್ಥಿತರಿದರು.

 

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News