ಮಂಗಳೂರು: ಬೆಂಕಿ ಆಕಸ್ಮಿಕ; ಹೆದ್ದಾರಿ ಮಧ್ಯೆ ಅಗ್ನಿಗಾಹುತಿಯಾದ ಕಾರು
Update: 2025-05-25 15:02 IST
ಮಂಗಳೂರು, ಮೇ.25: ನಗರದ ಬಿಕರ್ನಕಟ್ಟೆ ಸಮೀಪದ ಕೈಕಂಬ ಬಳಿಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಕಾರು ಬೆಂಕಿಗೆ ಆಹುತಿಯಾದ ಘಟನೆ ಇಂದು ಬೆಳಗ್ಗೆ ನಡೆದಿದೆ.
ಎಡೆಬಿಡದೆ ಸುರಿಯುವ ಮಳೆಯಲ್ಲೇ ಚಲಿಸುತ್ತಿದ್ದ ಕಾರಿನ ಬೋನೆಟ್‌ನಲ್ಲಿ ಇದ್ದಕ್ಕಿದ್ದಂತೆಯೇ ಬೆಂಕಿ ಕಾಣಿಸಿಕೊಂಡಿದ್ದು, ತಕ್ಷಣವE ಕಾರಿನಲ್ಲಿದ್ದವರು ಇಳಿದು ಅಪಾಯದಿಂದ ಪಾರಾದರು ಎಂದು ತಿಳಿದು ಬಂದಿದೆ.
ಆದರೆ, ಕಾರು ಭಾಗಶ: ಬೆಂಕಿಗೆ ಆಹುತಿಯಾಗಿದ್ದು, ಇದರ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.