ಮಂಗಳೂರು: ಗುಂಪು ಹಲ್ಲೆಯಿಂದ ಹತ್ಯೆಗೀಡಾದ ವಲಸೆ ಕಾರ್ಮಿಕ ಕೇರಳದ ಅಶ್ರಫ್
Update: 2025-04-29 23:37 IST
ಮಂಗಳೂರು: ಗುಂಪು ಹಲ್ಲೆಯಿಂದ ಹತ್ಯೆಯಾದ ವ್ಯಕ್ತಿಯ ಗುರುತು ಪತ್ತೆಯಾಗಿದೆ. ಕೇರಳದ ವಯನಾಡು ಜಿಲ್ಲೆಯ ಸುಲ್ತಾನ್ ಬತ್ತೇರಿ ತಾಲೂಕಿನ ಪುಲ್ಪಳ್ಳಿ ಗ್ರಾಮದ ಅಶ್ರಫ್ ಗುಂಪು ಹಲ್ಲೆಯಿಂದ ಮೃತರಾದ ವ್ಯಕ್ತಿ ಎಂದು ಗುರುತಿಸಲಾಗಿದೆ.
ಮಂಗಳೂರು ನಗರ ಹೊರವಲಯದ ಕುಡುಪು ಬಳಿ ರವಿವಾರ ಸಂಜೆ ಗುಂಪು ಹಲ್ಲೆಯಿಂದ ಹತ್ಯೆಗೀಡಾದ ವಲಸೆ ಕಾರ್ಮಿಕ ಕೇರಳಿಗ ಎಂದು ಹೇಳಲಾಗುತ್ತಿತ್ತು.
ಕೇರಳದ ವಯನಾಡಿನ ಪುಲ್ಪಳ್ಳಿ ಎಂಬಲ್ಲಿನ ಅಶ್ರಫ್ ಎಂಬಾತನಿಗೂ ಕುಡುಪು ಬಳಿ ಕೊಲೆಯಾದ ವಲಸೆ ಕಾರ್ಮಿಕನ ಫೋಟೋಕ್ಕೂ ಸಾಮ್ಯತೆ ಕಂಡು ಬಂದಿದೆ. ಅದರಂತೆ ಅಶ್ರಫ್‌ನ ಮನೆಯವರು ಮಂಗಳೂರಿಗೆ ಆಗಮಿಸುತ್ತಿದ್ದು, ಮೃತದೇಹವನ್ನು ಪರಿಶೀಲಿಸಿ ಹತ್ಯೆಗೀಡಾದ ವ್ಯಕ್ತಿ ಅಶ್ರಫ್ ಎಂದು ಗುರುತು ಪತ್ತೆ ಹಚ್ಚಿರುವುದಾಗಿ ತಿಳಿದುಬಂದಿದೆ.