ಮೂಡುಬಿದಿರೆ | ಡಿ.7ರಂದು ‘ಸಮಸ್ತ ಆದರ್ಶ ಸಮ್ಮೇಳನ’
ಮೂಡುಬಿದಿರೆ, ಡಿ.4: ಸಮಸ್ತದ ನೂರನೇ ವಾರ್ಷಿಕ ಅಂತರ್‌ರಾಷ್ಟ್ರೀಯ ಮಹಾ ಸಮ್ಮೇಳನದ ಪ್ರಯುಕ್ತ ಹಾಗೂ ಸಮಸ್ತ ಅಧ್ಯಕ್ಷ ಸಯ್ಯಿದುಲ್ ಉಲಮಾ ಸೈಯದ್ ಜಿಫ್ರಿ ಮುತ್ತುಕ್ಕೋಯ ತಂಞಳ್ ಕನ್ಯಾಕುಮಾರಿಯಿಂದ ಮಂಗಳೂರು ತನಕ ಹಮ್ಮಿಕೊಂಡಿರುವ ಶತಾಬ್ದಿ ಸಂದೇಶ ಯಾತ್ರೆಯ ಪ್ರಚಾರಾರ್ಥ ಸಮಸ್ತ ಆದರ್ಶ ಸಮ್ಮೇಳನವು ಡಿ.7ರಂದು ಮೂಡುಬಿದಿರೆಯ ಲಾಡಿಯಲ್ಲಿ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿಂದು ಈ ಬಗ್ಗೆ ಮಾಹಿತಿ ನೀಡಿದ ಸಮ್ಮೇಳನ ಸ್ವಾಗತ ಸಮಿತಿಯ ಅಧ್ಯಕ್ಷ ಡಿ.ಎ.ಉಸ್ಮಾನ್ ಏರ್ ಇಂಡಿಯಾ, ಅಂದು ಅಪರಾಹ್ನ 2ಕ್ಕೆ ಮೂಡುಬಿದಿರೆ ಡೌನ್ ಟೌನ್ ಮಸೀದಿಯಿಂದ ಲಾಡಿಯವರೆಗೆ ಕಾಲ್ನಡಿಗೆ ಜಾಥಾ ನಡೆಯಲಿದೆ. 3:30ಕ್ಕೆ ಸ್ವಾಗತ ಸಮಿತಿಯ ಗೌರವ ಸಲಹೆಗಾರ ಅಬ್ದುರ‌್ರಹ್ಮಾನ್ ಧ್ವಜಾರೋಹಣ ನೆರವೇರಿಸಲಿದ್ದಾರೆ. ಅಸರ್ ನಮಾಝ್ ಬಳಿಕ ಬೆಳ್ತಂಗಡಿ ದಾರುಸ್ಸಲಾಮ್ ಎಜುಕೇಶನ್ ಸೆಂಟರ್ ಅಧ್ಯಕ್ಷ ಸೈಯದ್ ಝೈನುಲ್ ಆಬಿದೀನ್ ಜಿಫ್ರಿ ತಂಳ್ ನೇತೃತ್ವದಲ್ಲಿ ಶಂಸುಲ್ ಉಲಮಾ ಮೌಲಿದ್ ಹಾಗೂ ಶೈಖುನಾ ತೊಟ್ಟಿ ಉಸ್ತಾದ್ ಅನುಸ್ಮರಣೆ ನಡೆಯಲಿದೆ ಎಂದು ತಿಳಿಸಿದರು.
ಮಗ್ರಿಬ್ ನಮಾಝ್ ಬಳಿಕ ನಡೆಯಲಿರುವ ಆದರ್ಶ ಮಹಾ ಸಮ್ಮೇಳನವನ್ನು ದ.ಕ. ಖಾಝಿ ಹಾಗೂ ಸಮಸ್ತ ಕೇಂದ್ರ ಮುಶಾವರ ಸದಸ್ಯ ಶೈಖುನಾ ತ್ವಾಖಾ ಅಹ್ಮದ್ ಅಲ್ ಅಝಹರಿ ಉದ್ಘಾಟಿಸಲಿದ್ದಾರೆ. ಜಂಇಯ್ಯತುಲ್ ಮುಅಲ್ಲಿಮೀನ್ ಮೂಡುಬಿದಿರೆ ರೇಂಜ್ ಅಧ್ಯಕ್ಷ ಸೈಯದ್ ಅಕ್ರಂ ಅಲಿ ತಂಞಳ್ ರಹ್ಮಾನಿ ದುಆ ನೆರವೇರಿಸುವರು. ಸ್ವಾಗತ ಸಮಿತಿಯ ಉಪಾಧ್ಯಕ್ಷ ಮುಹಮ್ಮದ್ ಶರೀಫ್ ದಾರಿಮಿ ಸ್ವಾಗತಿಸಲಿದ್ದಾರೆ.
ಬಳಿಕ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಕಾರ್ಯದರ್ಶಿ ಶೈಖುನಾ ಉಮರ್ ಫೈಝಿ ಮುಕ್ಕಂ ಹಾಗೂ ದಾರುರ‌್ರಹ್ಮಾನ್ ಎಸ್‌ಎನ್‌ಇಸಿ ಕಾಲೇಜಿನ ಪ್ರಾಂಶುಪಾಲ ಸಲಾಹುದ್ದೀನ್ ಫೈಝಿ ವಲ್ಲಪ್ಪುಝ ಮುಖ್ಯ ಭಾಷಣ ಮಾಡಲಿದ್ದಾರೆ.
ಉವೈಸ್ ಮದನಿ ಅಲ್ ಅಝ್ಹರಿ ತೋಕೆ, ಕೇಂದ್ರ ಮುಶಾವರ ಸದಸ್ಯರಾದ ಶೈಖುನಾ ಅಬ್ದುಲ್ ಖಾದರ್ ಅಲ್ ಖಾಸಿಮಿ ಬಂಬ್ರಾಣ ಹಾಗೂ ಶೈಖುನಾ ಉಸ್ಮಾನುಲ್ ಫೈಝಿ ತೋಡಾರ್ ಭಾಷಣ ಮಾಡಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಎಸ್‌ಎನ್‌ಇಸಿ ರಾಜ್ಯಾಧ್ಯಕ್ಷ ಸೈಯದ್ ಅಕ್ರಂ ಅಲಿ ತಂಳ್, ಸ್ವಾಗತ ಸಮಿತಿಯ ಗೌರವ ಸಲಹೆಗಾರ ಅಬ್ದುರ‌್ರಹ್ಮಾನ್, ಪ್ರಧಾನ ಕಾರ್ಯದರ್ಶಿ ಅಶ್ರಫ್ ಮರೋಡಿ, ಉಪಾಧ್ಯಕ್ಷ ಅಝೀಝ್ ಮಾಲಿಕ್, ಕಾರ್ಯದರ್ಶಿ ಅಬ್ದುಲ್ ಗಫೂರ್, ಸಂಘಟನಾ ಕಾರ್ಯದರ್ಶಿ ಮುಹಮ್ಮದ್ ಫಾಯಿಝ್ ಫೈಝಿ ಉಪಸ್ಥಿತರಿದ್ದರು.