ಮಾಣಿ: ಬಾಲವಿಕಾಸ ಶಾಲೆಯಲ್ಲಿ ಮಕ್ಕಳ ಪೋಷಕರ ಆರ್ಥಿಕ ಅನುಕೂಲಕ್ಕಾಗಿ "ವಿಶ್ವಾಸ ನಿಧಿ" ಯೋಜನೆ
ಬಂಟ್ವಾಳ : ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದರ ಜೊತೆಗೆ ಮಕ್ಕಳ ಪೋಷಕರ ಆರ್ಥಿಕ ಅನುಕೂಲಕ್ಕಾಗಿ "ವಿಶ್ವಾಸ ನಿಧಿ" ಯೋಜನೆಯನ್ನು ಮಾಣಿ ಬಾಲವಿಕಾಸ ಆಂಗ್ಲಮಾಧ್ಯಮ ಶಾಲೆಯಲ್ಲಿ ಅನುಷ್ಠಾನ ಗೊಳಿಸಿದ್ದೇವೆ ಎಂದು ಮಾಣಿ ಬಾಲವಿಕಾಸ ಟ್ರಸ್ಟ್ ನ ಅಧ್ಯಕ್ಷ ಪ್ರಹ್ಲಾದ್ ಜೆ.ಶೆಟ್ಟಿ ಹೇಳಿದರು.
ಮಾಣಿ ಪೆರಾಜೆ ಬಾಲವಿಕಾಸ ಆಂಗ್ಲಮಾಧ್ಯಮ ಶಾಲೆಯಲ್ಲಿ ರವಿವಾರ ನಡೆದ ಪೋಷಕರ ಸಭೆಯಲ್ಲಿ ನೂತನ ವಿಶ್ವಾಸ ನಿಧಿ ಯೋಜನೆಯ ಕುರಿತು ಅವರು ಮಾಹಿತಿ ನೀಡಿದ ಅವರು ಮಕ್ಕಳ ಭವಿಷ್ಯದ ಬಗ್ಗೆ ಹೆತ್ತವರು ಹಲವು ಕನಸುಗಳನ್ನು ಕಾಣುತ್ತಾರೆ, ಆದರೆ ಕೆಲವೊಂದು ಸಮಯ ಸಂದರ್ಭಗಳು ನಮ್ಮನ್ನು ಕಟ್ಟಿಹಾಕುತ್ತವೆ, ಆದರೆ ವಿಶ್ವಾಸ ನಿಧಿ ಯೋಜನೆಯಲ್ಲಿ ತೊಡಗಿಸಿ ಕೊಂಡವರು ಮಕ್ಕಳ ಬಗೆಗಿನ ಕನಸುಗಳನ್ನು ಸಾಕಾರಗೊಳಿಸಲು ಸುಲಭ ಸಾದ್ಯವಿದೆ, ಈ ನಿಟ್ಟಿನಲ್ಲಿ ಪೋಷಕರು ಹೆಚ್ಚಿನ ಚಿಂತನೆ ನಡೆಸಿ ವಿಶ್ವಾಸ ನಿಧಿ ಯೋಜನೆಯಲ್ಲಿ ತೊಡಗಿಸಿಕೊಳ್ಳುವಂತೆ ಕರೆ ನೀಡಿದರು.
ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ ಮಾತನಾಡಿ, ಗ್ರಾಮೀಣ ಮಕ್ಕಳಿಗೂ ಆಂಗ್ಲಮಾಧ್ಯಮದಲ್ಲಿ ಶಿಕ್ಷಣ ಸಿಗಬೇಕು ಎನ್ನುವ ಕನಸನ್ನು ಹೊತ್ತ ಪ್ರಹ್ಲಾದ್ ಶೆಟ್ಟಿವರ ಕನಸು ಬಾಲವಿಕಾಸ ಶಾಲೆ, ಇದೀಗ ಪೋಷಕರ ಅನುಕೂಲಕ್ಕಾಗಿ ಜಾರಿಗೆ ತಂದಿರುವ ವಿಶ್ವಾಸ ನಿಧಿ ಯೋಜನೆ ಪೋಷಕರಲ್ಲಿ ಆತ್ಮವಿಶ್ವಾಸ ತುಂಬಲಿದೆ ಎಂದರು.
ಶಾಲಾ ಮುಖ್ಯ ಶಿಕ್ಷಕಿ ಸುಪ್ರಿಯಾ ಡಿ. ಮಾತನಾಡಿ, ಹತ್ತನೇ ತರಗತಿ ವರೆಗಿನ ಗುಣಾತ್ಮಕ ಶಿಕ್ಷಣವನ್ನು ಖಾತ್ರಿಗೊಳಿಸುವ ನಿಟ್ಟಿನಲ್ಲಿ ವಿಶ್ವಾಸ ನಿಧಿ ಯೋಜನೆ ಮಕ್ಕಳಿಗೆ ಹೆಚ್ಚು ಅನುಕೂಲಕರವಾಗಿಗಲಿದೆ, ಪ್ರೀನರ್ಸರಿಯಿಂದ 7 ನೇ ತರಗತಿ ವರೆಗಿನ ಮಕ್ಕಳ ಪೋಷಕರು, ಟ್ರಸ್ಟ್ ನಿಗದಿ ಪಡಿಸಿರುವ ಮೊತ್ತವನ್ನು ಒಂದೇ ಕಂತಿನಲ್ಲಿ ಪಾವತಿಸಿದರೆ ಮುಂದೆ 10 ನೇ ತರಗತಿವರೆಗೆ ಯಾವುದೇ ಹಣ ಪಾವತಿಸುವ ಅವಶ್ಯಕತೆ ಇಲ್ಲ. ವಿಶ್ವಾಸ ನಿಧಿಯ ಮಕ್ಕಳಿಗೆ ಪುಸ್ತಕ ಖರೀದಿ, ಯೂನಿಫಾರಂ, ಮಧ್ಯಾಹ್ನದ ಊಟದ ಶುಲ್ಕಗಳಿಗೂ ವಿಶೇಷ ರಿಯಾಯಿತಿ ನೀಡುವುದಾಗಿ ಅವರು ಈ ಸಂದರ್ಭ ಪ್ರಕಟಿಸಿದರು.
ಬಾಲವಿಕಾಸ ಟ್ರಸ್ಟ್ ಕಾರ್ಯದರ್ಶಿ ಮಹೇಶ್ ಜೆ ಶೆಟ್ಟಿಯವರು ಮಾತನಾಡಿ, ಪೋಷಕರ ಪ್ರಶ್ನೆಗಳಿಗೆ ಉತ್ತರಿಸಿದರು, ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ಮಹಮ್ಮದ್ ಯಾಸೀರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.