×
Ad

ರಾಷ್ಟ್ರಮಟ್ಟದ ಈಜು ಸ್ಪರ್ಧೆ : ಮಂಗಳೂರಿನ ಶ್ವಿತಿ ದಿವಾಕರ್‌ಗೆ 4 ಚಿನ್ನದ ಪದಕ

Update: 2024-08-27 20:07 IST

ಮಂಗಳೂರು: ಒಡಿಶಾದ ಭುವನೇಶ್ವರದಲ್ಲಿ ಭಾರತೀಯ ಈಜು ಸಂಸ್ಥೆಯ ಆಶ್ರಯದಲ್ಲಿ ಇತ್ತೀಚೆಗೆ ನಡೆದ 40ನೇ ಸಬ್ ಜೂನಿಯರ್ ಹಾಗೂ 50ನೇ ಜೂನಿಯರ್ ಈಜು ಚಾಂಪಿಯನ್‌ಶಿಪ್‌ನಲ್ಲಿ ಮಂಗಳೂರಿನ ಪ್ರತಿಭೆ ಶ್ವಿತಿ ದಿವಾಕರ್ ಸುವರ್ಣ ಅವರು ಗುಂಪು 3ರ ಬಾಲಕಿಯರ ವಿಭಾಗದಲ್ಲಿ ಸ್ಪರ್ಧಿಸಿ 4 ಚಿನ್ನ, 2 ಬೆಳ್ಳಿ ಹಾಗೂ 1 ಕಂಚಿನ ಪದಕ ಗಳಿಸಿದ್ದಾರೆ.

ವಿ-ವನ್ ಅಕ್ವಾ ಸೆಂಟರ್‌ನಲ್ಲಿ ತರಬೇತಿ ಪಡೆಯುತ್ತಿರುವ ಶ್ವಿತಿ 50 ಮೀ. ಮತ್ತು 100 ಮೀ. ಬಟಫ್ಲೈ, 4 x 50 ಮೀ. ಮೆಡ್ ರಿಲೇ, ಫ್ರೀಸ್ಟೈಲ್ ರಿಲೇಗಳಲ್ಲಿ ಚಿನ್ನದ ಪದಕ. 50 ಮೀ. ಫ್ರೀಸ್ಟೈಲ್, 50 ಮೀ. ಬ್ಯಾಕ್‌ಸ್ಟೋಕ್‌ನಲ್ಲಿ ಬೆಳ್ಳಿ ಪದಕ ಹಾಗೂ 100 ಮೀ. ಫ್ರೀಸ್ಟೈಲ್‌ನಲ್ಲಿ ಕಂಚಿನ ಪದಕ ಗಳಿಸಿದ್ದಾರೆ.

ಜೂನಿಯರ್ ವಿಭಾಗದ ಗುಂಪು 1 ರಲ್ಲಿ ಅಲಿಸ್ಟರ್ ಸಾಮ್ಯುಯೆಲ್ ರೇಗೋ 4 x 100 ಮೀ. ಹಾಗೂ 4 x 200 ಮೀ. ಫ್ರೀಸ್ಟೈಲ್ ರಿಲೇ ವಿಭಾಗದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿ ಎರಡು ಚಿನ್ನದ ಪದಕ ಗಳಿಸಿದ್ದಾರೆ.

ಇವರು ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತ ಬೆಂಗಳೂರಿನ ಡಾಲ್ಟಿನ್ ಅಕ್ವಾ ಸೆಂಟರ್‌ನ ತರಬೇತುದಾರ ನಿಹಾರ್ ಅಮೀನ್ ಹಾಗೂ ಮಧು ಕುಮಾರ್ ಬಿ.ಎಂ. ಮಾರ್ಗದರ್ಶನದಲ್ಲಿ ಮುಖ್ಯ ತರಬೇತುದಾರ ಲೋಕರಾಜ್ ವಿಟ್ಲ ಹಾಗೂ ತರಬೇತುದಾರ ಸಾಂಜೋ ಕೆ.ಪಿ. ಅವರಲ್ಲಿ ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜಿನ ಈಜುಕೊಳದಲ್ಲಿ ತರ ಬೇತಿ ಪಡೆಯುತ್ತಿದ್ದಾರೆ. ಸೈಂಟ್ ಅಲೋಶಿಯಸ್ ವಿದ್ಯಾಸಂಸ್ಥೆಗಳ ರೆಕ್ಟರ್ ಫಾ. ಮೆಲ್ವಿನ್ ಜೋಸೆಫ್ ಪಿಂಟೋ ಮತ್ತು ವಿ-ವನ್ ಆಕ್ವಾ ಸೆಂಟರ್ ನಿರ್ದೇಶಕ ನವೀನ್ ಪಡೀಲ್ ಹಾಗೂ ರೂಪಾ ಜಿ. ಪ್ರಭು ಅಭಿನಂದಿಸಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News