×
Ad

ಕಲೆ, ಸಾಹಿತ್ಯವನ್ನು ಮೌಲ್ಯವಾಗಿ ನೋಡಬೇಕಾಗಿದೆ: ಶತಾವಧಾನಿ ಗಣೇಶ್

Update: 2025-01-12 20:15 IST

ಮಂಗಳೂರು: ಕಲೆ, ಸಾಹಿತ್ಯವನ್ನು ಮೌಲ್ಯವಾಗಿ ನೋಡಬೇಕಾಗಿದೆ. ಈ ಅನನ್ಯತೆಯನ್ನು ಉಳಿಸಿಕೊಳ್ಳಲು ಪ್ರೀತಿಯ ಅಗತ್ಯತೆ ಇದೆ ಎಂದು ಶತಾವಧಾನಿ ಡಾ.ಆರ್. ಗಣೇಶ್ ಹೇಳಿದ್ದಾರೆ.

ನಗರದಲ್ಲಿ ನಡೆದ ೭ನೇ ಲಿಟ್ ಫೆಸ್ಟ್‌ನ ಸಮಾರೋಪ ಗೋಷ್ಠಿಯಲ್ಲಿ ಮಾತನಾಡಿದರು.

ಈಗಿನ ಸಂಸ್ಕೃತ ಕಾವ್ಯಶಾಸ್ತ್ರ ಅಂತರ್ಜಾಲದಲ್ಲಿ ಸುಲಭವಾಗಿ ಸಿಗುತ್ತದೆ. ಇದನ್ನು ಪ್ರೀತಿಯಿಂದ ಮಾಡಿಕೊಂಡು ಬಂದಿದ್ದರಿಂದ ಸಾಧ್ಯವಾಗಿದೆ. ಶಾಸ್ತ್ರೀಯ ಸಂಗೀತವನ್ನೂ ಇದೇ ರೀತಿಯಲ್ಲಿ ನಡೆಸಿಕೊಂಡು ಬರಲಾಗಿದೆ. ಕಲೆ- ಸಾಹಿತ್ಯದ ಅನನ್ಯತೆಯನ್ನು ಉಳಿಸಿಕೊಳ್ಳಲು ಇಂತಹ ಪ್ರೀತಿ ತುಂಬ ಅಗತ್ಯ ಎಂದರು.

ಈಗ ನಮ್ಮ ದೇಶದಲ್ಲಿ ಸಿಗುವಷ್ಟು ಶಾಸ್ತ್ರಗಳು ಎಲ್ಲೂ ಸಿಗಲ್ಲ. ಆದರೆ ಈ ಶಾಸ್ತ್ರಗಳನ್ನು ಓದುವವರು ಎಷ್ಟು ಮಂದಿ ಇದ್ದಾರೆ ಎಂದು ಪ್ರಶ್ನಿಸಿದ ಅವರು ವಿಶ್ವ ವಿದ್ಯಾನಿಲಯಗಳು, ಅಕಾಡೆಮಿಗಳು ಪರಿಶ್ರಮದ ಪಾಂಡಿತ್ಯಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಸಲಹೆ ನೀಡಿದರು.

ಲೇಖಕ ಡಾ.ಅಜಕ್ಕಳ ಗಿರೀಶ್ ಭಟ್ ಉಪಸ್ಥಿತರಿದ್ದರು.

*ಯುವ ಕವಿಗೋಷ್ಠಿ: ಯುವ ಕವಿಗೋಷ್ಠಿಯಲ್ಲಿ ಸತೀಶ್ ಹೆಗ್ಡೆ ಶಿರಸಿ, ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು, ಸ್ಮಿತಾ ಅಮೃತರಾಜ್ ಭಾಗವಹಿಸಿದ್ದರು. ಗುರುಪ್ರಸಾದ್ ಟಿ.ಎನ್ .ಗೋಷ್ಠಿಯನ್ನು ನಿರ್ವಹಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News