×
Ad

ಕೈಕಂಬ | ನದಿಯಲ್ಲಿ ತಾತ್ಕಾಲಿಕವಾಗಿ ನಿರ್ಮಿಸಲಾದ ರಸ್ತೆಯಿಂದ ನೀರಿಗೆ ಬಿದ್ದ ಟಿಪ್ಪರ್‌; ಚಾಲಕ ಪ್ರಾಣಾಪಾಯದಿಂದ ಪಾರು

Update: 2025-02-13 13:20 IST

ಕೈಕಂಬ : ಪಲ್ಗುಣಿ ನದಿಯಲ್ಲಿ ನಿರ್ಮಿಸಲಾದ ತಾತ್ಕಾಲಿಕ ರಸ್ತೆಯಿಂದ ಟಿಪ್ಪರ್‌ವೊಂದು ನದಿಗೆ ಬಿದ್ದ ಘಟನೆ ಬುಧವಾರ ಸಂಭವಿಸಿದೆ.

ಪೊಳಲಿ-ಅಡ್ಡೂರು ಪಲ್ಗುಣಿ ಸೇತುವೆಯ ದುರಸ್ಥಿ ಕಾಮಗಾರಿಯ ಹಿನ್ನಲೆಯಲ್ಲಿ‌ ತಾತ್ಕಾಲಿಕ ರಸ್ತೆ ನಿರ್ಮಿಸಲಾಗಿತ್ತು. ಸೇತುವೆಯ ದುರಸ್ಥಿ ಕಾಮಗಾರಿಯು ಭರದಿಂದ ಸಾಗುತ್ತಿದ್ದು, ಈ ಹಿನ್ನಲೆಯಲ್ಲಿ ಇದಕ್ಕೆ ಬೇಕಾದ ಸಾಮಾಗ್ರಿಗಳನ್ನು ತರಲು ನದಿಗೆ ಮಣ್ಣು ಹಾಕಿ ತಾತ್ಕಾಲಿಕ ರಸ್ತೆ ನಿರ್ಮಿಸಲಾಗಿತ್ತು. ರಸ್ತೆಗೆ ಜಲ್ಲಿ ಕಲ್ಲು ತಂದು ಹಾಕಿ ಟಿಪ್ಪರ್‌ ಅನ್ನು ಹಿಂದಕ್ಕೆ ತಿರುಗಿಸುವ ವೇಳೆ ನಿಯಂತ್ರಣ ತಪ್ಪಿ ಸುಮಾರು‌10 ಅಡಿಯಷ್ಟು ನದಿ ನೀರಿಗೆ ಮಗುಚಿ ಬಿದ್ದಿದೆ.

ಘಟನೆಯಿಂದಾಗಿ ಟಿಪ್ಪರ್ ನ ನಾಲ್ಕು ಚಕ್ರಗಳು‌ ಮೇಲ್ಮುಖವಾಗಿ ಬಿದ್ದಿದ್ದು, ಚಾಲಕ ಪ್ರಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News