×
Ad

ಮಲೇಷಿಯಾ ಕೆಸಿಎಫ್ ವತಿಯಿಂದ ಝೈನಿ ಕಾಮಿಲ್‌ಗೆ ಸನ್ಮಾನ

Update: 2025-02-15 21:45 IST

ಮಂಗಳೂರು: ಕುಂಬ್ರ ಮಾರ್ಕಝುಲ್ ಹುದಾ ಮಹಿಳಾ ಕಾಲೇಜಿನ ಪ್ರಚಾರಾರ್ಥ ಮಲೇಷಿಯಾ ಪ್ರವಾಸದಲ್ಲಿರುವ ಡಾ. ಎಮ್ಮೆಸ್ಸೆಂ ಅಬ್ದುಲ್ ರಶೀದ್ ಝೈನಿಗೆ ಕರ್ನಾಟಕ ಕಲ್ಚರಲ್ ಫೌಂಡೇಶನ್ ಮಲೇಷಿಯಾ ರಾಷ್ಟೀಯ ಸಮಿತಿಯ ವತಿಯಿಂದ ಸನ್ಮಾನಿಸಲಾಯಿತು.

ಜೋಹರ್ ಪ್ರಾಂತದ ತಮನ್ ದಮಾಯಿ ಜಯ ಸ್ವಲಾತ್ ಮಜ್ಲಿಸ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆಸಿಎಫ್ ಮಲೇಷಿಯಾ ರಾಷ್ಟೀಯ ಸಮಿತಿ ಅಧ್ಯಕ್ಷ ಅಬ್ದುಲ್ ಅಝೀಝ್ ಸಖಾಫಿ ಸಂಸೆ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಶರೀಫ್ ಸಖಾಫಿ ಮಠ ಸಂದೇಶ ಭಾಷಣಗೈದರು. ಪ್ರೊಫೆಷನಲ್ ಕಾರ್ಯದರ್ಶಿ ಶರಫುದ್ದೀನ್ ಕುದ್ರೆಗುಂಡಿ ಸ್ವಾಗತಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News