×
Ad

ಮಂಗಳೂರು: ಟಿಎಂಎ ಪೈ ಕನ್ವೆನ್ಶನ್ ಸೆಂಟರ್‌ನಲ್ಲಿ ರೆಡಿಮೇಡ್ ಉಡುಪುಗಳ ಮಾರಾಟ ಮೇಳ

Update: 2025-02-22 22:45 IST

ಮಂಗಳೂರು: ರೆಡಿಮೇಡ್ ಉಡುಪುಗಳ ಬೃಹತ್ ಮಾರಾಟ ಮೇಳ ನಗರದ ಎಂ.ಜಿ.ರಸ್ತೆಯ ಟಿಎಂಎ ಪೈ ಕನ್ವೆನ್ಶನ್ ಸೆಂಟರ್‌ನ ಗ್ರೌಂಡ್ ಫ್ಲೋರ್‌ನಲ್ಲಿ ಆರಂಭಗೊಂಡಿದ್ದು, ಫೆ.23 ಕೊನೆಯ ದಿನವಾಗಿದೆ.

ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್ ಶೋ ರೂಮ್‌ಗಳು ಮುಚ್ಚಿದ ಹಿನ್ನೆಲೆಯಲ್ಲಿ ಅಲ್ಲಿನ ಸರಕುಗಳನ್ನು ಮಂಗಳೂರಿನಲ್ಲಿ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಈ ಬೃಹತ್ ಮಾರಾಟ ಮೇಳದಲ್ಲಿ ಮಹಿಳೆಯರ, ಪುರುಷರ ಹಾಗೂ ಮಕ್ಕಳ ರೆಡಿಮೇಡ್ ಉಡುಪುಗಳ ಅಪಾರ ಸಂಗ್ರಹವಿದ್ದು, ಅತಿ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಆಯೋಜಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಸಾವಿರಾರು ಶಾಪಿಂಗ್‌ಮಾಲ್‌ಗಳಿಗೆ ಪೂರೈಕೆದಾರರಾಗಿರುವ ಈ ಕಂಪನಿಯು ಮೊದಲ ಬಾರಿಗೆ ಶೇ.90ವರೆಗಿನ ಭಾರಿ ರಿಯಾಯಿತಿಯಲ್ಲಿ ಬ್ರಾಂಡೆಡ್ ರೆಡಿಮೇಡ್ ಉಡುಪುಗಳ ತಾಜಾ ಸ್ಟಾಕ್‌ಗಳನ್ನು ಮಾರಾಟ ಮಾಡುತ್ತಿದೆ.

ಮಕ್ಕಳ ಉಡುಪುಗಳು ಕೇವಲ 99ರೂ.ನಿಂದ, ಮಹಿಳೆಯರ ಉಡುಪುಗಳು ಕೇವಲ 149 ರೂ.ನಿಂದ ಪ್ರಾರಂಭವಾ ಗುತ್ತವೆ. ಮಹಿಳೆಯರ ರಾತ್ರಿ ಉಡುಗೆ ಪಾಶ್ಚಿಮಾತ್ಯ ಪ್ರಕಾರದ ಗರಿಷ್ಟ 2,499 ರೂ.ನಿಂದ 3,999 ರೂ.ವರೆಗೆ ಇದ್ದು, ಈಗ ಕೇವಲ 249 ರೂ., ಮತ್ತು ಬ್ರಾಂಡೆಡ್ ಶರ್ಟ್‌ಗಳ 3 ಪೀಸ್‌ಗಳು ಕೇವಲ ರೂ.999ಗೆ ಲಭ್ಯವಿದೆ.

*ಪುರುಷರ ಉಡುಪುಗಳು-ಶರ್ಟ್‌ಗಳು, ಪ್ಯಾಂಟ್,ಟಿ-ಶರ್ಟ್, ಲೋವರ್, ಬರ್ಮುಡಾ, ಬ್ಲೇಜರ್, ವೇಸ್ಟ್‌ಕೋಟ್, ಸ್ವೆಟ್‌ಶರ್ಟ್ ಮತ್ತು ಮಹಿಳೆಯರ ಉಡುಪುಗಳು- ಕುರ್ತಿ, ಪಾಶ್ಚಾತ್ಯ ಉಡುಪುಗಳು, ಉದ್ದ ಕುರ್ತಿ, ಅಂಬ್ರೆಲಾ ಕುರ್ತಿ, ಉದ್ದ ಟಾಪ್, ಲೆಗ್ಗಿಂಗ್ಸ್, ಪ್ಲಾರೊ, ಜೆಗ್ಗಿಂಗ್ಸ್ ಇತ್ಯಾದಿ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News