×
Ad

ರಾಜ್ಯ ಸರಕಾರಕ್ಕೆ ದ.ಕ. ಜಿಲ್ಲಾ ಮುಸ್ಲಿಂ ಲೀಗ್ ಮನವಿ

Update: 2025-06-03 20:42 IST

ಮಂಗಳೂರು: ದುಷ್ಕರ್ಮಿಗಳಿಂದ ಬರ್ಬರವಾಗಿ ಹತ್ಯೆಗೀಡಾದ ಅಬ್ದುಲ್ ರಹ್ಮಾನ್‌ರ ಕುಟುಂಬಕ್ಕೆ 1 ಕೋ.ರೂ. ನೀಡುವಂತೆ, ಅವರ ಪತ್ನಿಗೆ ಸರಕಾರದಿಂದ ಉದ್ಯೋಗ ನೀಡುವಂತೆ, ಮಕ್ಕಳ ವಿದ್ಯಾಭ್ಯಾಸ ಕ್ಕಾಗಿ ನಿಗದಿತ ಮೊತ್ತವನ್ನು ಠೇವಣಿ ಇಡುವಂತೆ, ದುರ್ಷ್ಕುಗಳಿಂದ ಹಲ್ಲೆಗೊಳಗಾಗಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿರುವ ಶಾಫಿ ಕಲಂದರ್‌ರ ಚಿಕಿತ್ಸಾ ವೆಚ್ಚಗಳನ್ನು ಭರಿಸುವುದರೊಂದಿಗೆ 25 ಲಕ್ಷ ರೂ. ಪರಿಹಾರ ನೀಡುವಂತೆ, ಹತ್ಯೆಗೈದ ಆರೋಪಿಗಳನ್ನು ಮತ್ತು ಕೃತ್ಯದ ಹಿಂದಿರುವ ವ್ಯಕ್ತಿಗಳನ್ನು ಶೀಘ್ರ ಬಂಧಿಸುವಂತೆ ದ.ಕ.ಜಿಲ್ಲಾ ಮುಸ್ಲಿಂ ಲೀಗ್ ನಿಯೋಗ ಜಿಲ್ಲಾಡಳಿತದ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿದೆ.

ನಿಯೋಗದಲ್ಲಿ ಜಿಲ್ಲಾಧ್ಯಕ್ಷ ಸಿ. ಅಬ್ದುಲ್ ರಹ್ಮಾನ್, ಪದಾಧಿಕಾರಿಗಳಾದ ಕೆ.ಸಿ. ಅಬ್ದುಲ್ ಖಾದರ್ ಕಾವೂರು, ಲತೀಫ್ ಕುಂಡಾಲ, ಸಲೀಂ ಜಾವೇದ್, ಇಬ್ರಾಹೀಂ ಕಣ್ಣೂರು, ಹಾಜಿ ಮುಹಮ್ಮದ್ ಬಿ.ಎ., ರಿಯಾಝ್ ಹರೇಕಳ, ಮುಹಮ್ಮದ್ ಇಸ್ಮಾಯೀಲ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News