×
Ad

ದೇರಳಕಟ್ಟೆ: ಮನೆಯಲ್ಲಿ ಅಗ್ನಿ ಆಕಸ್ಮಿಕ; ಅಪಾರ ನಷ್ಟ

Update: 2025-06-07 11:13 IST

ಕೊಣಾಜೆ: ಮನೆಮಂದಿ ಸಂಬಂಧಿಕರ ಮನೆಯಲ್ಲಿ ರಾತ್ರಿ ಕಾರ್ಯಕ್ರಮಕ್ಕೆಂದು ತೆರಳಿದ್ದ ವೇಳೆ ಮನೆಯಲ್ಲಿ ಬೆಂಕಿ ಅವಘಡ ನಡೆದು ಮನೆಯು ಸಂಪೂರ್ಣವಾಗಿ ಹೊತ್ತಿ ಉರಿದ ಘಟನೆ ದೇರಳಕಟ್ಡೆ ಸಮೀಪದ ವೈದ್ಯನಾಥ ನಗರದಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದೆ.

ವೈದನಾಥ ನಗರದ ಸುಶೀಲ ಎಂಬವರ ಮನೆಯಲ್ಲಿ ರಾತ್ರಿ ಸುಮಾರು 10 ಗಂಟೆಯ ವೇಳೆಗೆ ದುರ್ಘಟನೆ ಸಂಭವಿಸಿದೆ.‌ ಸುಶಿಲಾ‌ ಅವರ ಸಹೋದರನ ಮಗಳ ಮದುವೆಯ ಪ್ರಯುಕ್ತ ಮೆಹಂದಿ ಕಾರ್ಯಕ್ರಮಕ್ಕೆಂದು ತೆರಳಿದ್ದರು. ರಾತ್ರಿಯ ವೇಳೆ ಮನೆಯ ಮಾಡಿನಲ್ಲಿ ಬೆಂಕಿ ಕಾಣಿಸಿದ್ದು ಸಮೀಪದ ಮನೆಯ ವ್ಯಕ್ತಿಯೊಬ್ಬರು ನೋಡಿ ಮನೆಮಂದಿಗೆ ಕರೆ ಮಾಡಿದ್ದರು. ಆಗ ಕಾರ್ಯಕ್ರಮದಿಂದ ಸುಶೀಲ ಅವರ ಮಗಳು ಆಶಾ ಹಾಗೂ ಅಳಿಯ ಜನಾರ್ದನ ಓಡಿ ಬಂದು ನೋಡಿದಾದ ಮನೆಯ ಒಂದು ಕೊಠಡಿಯ ಮಾಡಿನಲ್ಲಿ ಬೆಂಕಿ ಉರಿಯುತ್ತಿತ್ತು. ಬಳಿಕ ಸ್ಥಳೀಯರು ಸೇರಿ ಮನೆಯ ಬೆಂಕಿಯನ್ನು ಆರಿಸಲು ಪ್ರಯತ್ನ ಪಟ್ಟರು ಮನೆಯ ಮೇಲ್ಛಾವಣಿ ಸಂಪೂರ್ಣವಾಗಿ ಉರಿದಿತ್ತು.

ಆ ಸಂದರ್ಭದಲ್ಲಿ ಯುವಕನೋರ್ವ ಗ್ಯಾಸ್ ಸಿಲಿಂಡರನ್ನು ಮನೆಯಿಂದ ಹೊರಗೆ ಎಸೆದಿದ್ದು ದೊಡ್ಡ ಮಟ್ಟದ‌‌ ಅನಾಹುತ ತಪ್ಪಿದೆ. ಅಗ್ನಿ ಅವಢದಿಂದ ಮನೆಯ ಸೊತ್ತು ಗಳು ಭಸ್ಮಗೊಂಡಿದ್ದು, ಎಲೆಕ್ಟ್ರಾನಿಕ್ ವಸ್ತುಗಳಿಗೆ ಹಾನಿಯಾಗಿದೆ. ಸ್ಥಳಕ್ಕೆ ಅಗ್ನಿಶಾಮಕ‌ ದಳ ಆಗಮಿಸಿ ಬೆಂಕಿ ನಂದಿಸಲು ಪ್ರಯತ್ನಿಸಿದೆ. ಶಾರ್ಟ್ ಸರ್ಕ್ಯೂಟ್ ‌ನಿಂದಲೇ ಬೆಂಕಿ ಅವಘಡ ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ.





Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News