ಹತ್ಯೆಗೀಡಾದ ಕೊಳತ್ತಮಜಲು ರಹೀಮ್ ಮನೆಗೆ ಪಬ್ಲಿಕ್ ವಾಯ್ಸ್ ನಿಯೋಗ ಭೇಟಿ
Update: 2025-06-09 18:36 IST
ಬಂಟ್ವಾಳ : ದುಷ್ಕರ್ಮಿಗಳಿಂದ ಹತ್ಯೆಗೀಡಾದ ಅಬ್ದುಲ್ ರಹೀಮ್ ಅವರ ಮನೆಗೆ ಪಬ್ಲಿಕ್ ವಾಯ್ಸ್ ನಿಯೋಗ ಭೇಟಿ ನೀಡಿ ಮೃತರಾದ ರಹೀಮ್ ಅವರ ಮಗ್ಫಿರತ್ ಗಾಗಿ ದುವಾ ಮಾಡಿ ಅವರ ಕುಟುಂಬಕ್ಕೆ ಸಾಂತ್ವನ ನೀಡಿದರು.
ಈ ಸಂದರ್ಭದಲ್ಲಿ ಅವರ ಕುಟುಂಬದ ಜೊತೆಗೆ ಮಾತುಕತೆ ನಡೆಸಿ ನಮ್ಮಿಂದ ಸಾಧ್ಯವಾಗುವ ಎಲ್ಲಾ ರೀತಿಯ ಸಹಾಯ ಸಹಕಾರ ನೀಡುವ ಬಗ್ಗೆ ತಿಳಿಸಿದ ಅವರು ನಿಮ್ಮ ಸಂಕಷ್ಟದ ಹಾಗೂ ನೋವಿನ ಸಮಯದಲ್ಲಿ ಪಬ್ಲಿಕ್ ವಾಯ್ಸ್ ವಾಟ್ಸಪ್ ಬಳಗ ಸದಾ ನಿಮ್ಮೊಂದಿಗೆ ಇದೆ ಮತ್ತು ನ್ಯಾಯಕ್ಕಾಗಿ ನಿರಂತರ ಹೋರಾಟವನ್ನು ಮುಂದುವರೆಸುತ್ತೇವೆ ಎಂದು ಅವರ ಕುಟುಂಬಕ್ಕೆ ಭರವಸೆಯನ್ನು ನೀಡಿದರು.
ಈ ಸಂದರ್ಭ ಪಬ್ಲಿಕ್ ವಾಯ್ಸ್ ಕಾರ್ಯ ನಿರ್ವಾಹಕ ಇಮ್ತಿಯಾಝ್ ಕೆದಂಬಾಡಿ, ಸದಸ್ಯರಾದ ಮನ್ಸೂರ್ ಬಿಸಿ ರೋಡ್, ಜಲೀಲ್ ಉಪ್ಪಿನಂಗಡಿ, ಪಬ್ಲಿಕ್ ವಾಯ್ಸ್ ನಾ ಹಿತೈಷಿ ಹರೀಶ್ ಪೂಜಾರಿ ಹಾಜರಿದ್ದರು.