×
Ad

ಮಂಗಳೂರು: ಟ್ರೇಡ್ ಲೈಸೆನ್ಸ್ ನವೀಕರಿಸಲು ನಗರಪಾಲಿಕೆ ಸೂಚನೆ

Update: 2025-06-10 20:03 IST

ಮಂಗಳೂರು, ಜೂ.10: ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿರುವ 60 ವಾರ್ಡ್‌ಗಳ ಎಲ್ಲಾ ಉದ್ದಿಮೆದಾರರು ಕಡ್ಡಾಯವಾಗಿ ಉದ್ದಿಮೆ ಪರವಾನಿಗೆಯನ್ನು ಪಡೆದುಕೊಳ್ಳಬೇಕಾಗಿದೆ. ಆನ್‌ಲೈನ್ ತಂತ್ರಾಶದ ಮುಖಾಂತರ ಹೊಸ ಉದ್ದಿಮೆದಾರರು ಅರ್ಜಿಯನ್ನು ಸಲ್ಲಿಸಿ ಉದ್ದಿಮೆ ಪರವಾನಿಗೆ ಪಡೆಯುವುದು ಅವಶ್ಯಕವಾಗಿದೆ.

ಹಾಗಾಗಿ ಉದ್ದಿಮೆದಾರರು ಈ ಹಿಂದಿನ ಆರ್ಥಿಕ ವಷರ್ದಲ್ಲಿ ಪಡೆದುಕೊಂಡಿರುವ ಉದ್ದಿಮೆ ಪರವಾನಿಗೆ ನವೀಕರಿಸದೆ ಇದ್ದಲ್ಲಿ ಹಿಂದಿನ ಬಾಕಿಯನ್ನು ಹಾಗೂ ನವೀಕರಣ ಶುಲ್ಕವನ್ನು ಆನ್‌ಲೈನ್‌ನಲ್ಲಿ ಪಾವತಿಸು ವಂತೆ ಸೂಚಿಸಲಾಗಿದೆ. ತಪ್ಪಿದ್ದಲ್ಲಿ ಪಾಲಿಕೆಯ ಆರೋಗ್ಯ ನಿರೀಕ್ಷಕರು ಸ್ಥಳ ತನಿಖೆ ನಡೆಸಿ ಉದ್ದಿಮೆ ಪರವಾನಿಗೆ ಇಲ್ಲದ ಹಾಗೂ ಈವರೆಗೂ ನವೀಕರಣ ಮಾಡದ ಉದ್ದಿಮೆದಾರರಿಗೆ ನಿಯಾಮಾನುಸಾರ ಹೆಚ್ಚುವರಿ ದಂಡ ವಿಧಿಸಲಿದ್ದಾರೆ. ಹೆಚ್ಚಿನ ಮಾಹಿತಿಗೆ ದೂ.ಸಂ: 6364016555  ಸಂಪರ್ಕಿಸಬಹುದು ಎಂದು ಮಹಾನಗರಪಾಲಿಕೆ ಆಯುಕ್ತರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News