ಬೆಳ್ತಂಗಡಿ: ವೆಬ್‌ಸೈಟ್‌ನಲ್ಲಿ ಸುಳ್ಳು ಮಾಹಿತಿ ಆರೋಪ; ಪ್ರಕರಣ ದಾಖಲು
Update: 2025-07-05 21:46 IST
ಬೆಳ್ತಂಗಡಿ: ಸುಳ್ಳು ಮಾಹಿತಿ ನೀಡಿ ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸುವಂತೆ ಮಾಡಿದ ಆರೋಪದಲ್ಲಿ ವೆಬ್‌ಸೈಟ್ ಒಂದರ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಆರೋಪಿ ಸುದರ್ಶನ ವಿರುದ್ಧ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಧರ್ಮಸ್ಥಳದಲ್ಲಿ ಶವಗಳನ್ನು ಹೂತಿಟ್ಟ ಬಗ್ಗೆ ಮಾಹಿತಿ ನೀಡಲು ಎಸ್.ಪಿ ಅವರನ್ನು ಭೇಟಿಯಾಗಲು ಮಂಗಳೂರಿಗೆ ಬಂದ ವಕೀಲರ ತಂಡಕ್ಕೆ ಎಸ್.ಪಿ ಅವರು ಸಿಗದ ವಿಚಾರದ ಬಗ್ಗೆ ಹೊಸ ಕನ್ನಡ ವೆಬ್ ನ್ಯೂಸ್ ನಲ್ಲಿ ಆರೋಪಿ ಸುದರ್ಶನ ಎಂಬಾತ ಸುಳ್ಳು ಮಾಹಿತಿಯನ್ನು ವರದಿ ಮಾಡಿದ್ದು, ಈ ಬಗ್ಗೆ ಧರ್ಮಸ್ಥಳ ಪೊಲೀಸರು ವಿಚಾರಣೆ ನಡೆಸಿದಾಗ ಯಾವುದೇ ಮಾಹಿತಿಯಿಲ್ಲದೆ ಉದ್ದೇಶ ಪೂರ್ವಕವಾಗಿ ತಪ್ಪು ಮಾಹಿತಿ ನೀಡಿರುವ ಆರೋಪದಲ್ಲಿ ಸುದರ್ಶನ ವಿರುದ್ಧ ಧರ್ಮಸ್ಥಳ ಠಾಣೆಯಲ್ಲಿ ಕಲಂ 353,352,(1)b BNS ರಂತೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.