ಮರ್ಕಂಜ ಗ್ರಾಮದಲ್ಲಿ ಕೃಷಿ ತೋಟಗಳಿಗೆ ಕಾಡಾನೆ ದಾಳಿ: ಕೃಷಿ ನಾಶ
Update: 2025-07-07 22:29 IST
ಮರ್ಕಂಜ: ಗ್ರಾಮದ ದಾಸರಬೈಲು, ಕುದ್ಕುಳಿ ಭಾಗದಲ್ಲಿ ಕೃಷಿ ತೋಟಗಳಿಗೆ ಕಾಡಾನೆ ಹಿಂಡು ದಾಳಿ ಮಾಡಿ ಅಪಾರ ಪ್ರಮಾಣದಲ್ಲಿ ಕೃಷಿ ನಾಶ ಪಡಿಸಿದೆ.
ಮರ್ಕಂಜ ಗ್ರಾಮದ ದಾಸರಬೈಲು ಶಿವರಂಜನ್ ರಾವ್, ಚಾಮಯ್ಯ ಗೌಡ ಕುದ್ಕುಳಿ ಎಂಬವರ ಕೃಷಿ ತೋಟಕ್ಕೆ ಭಾನುವಾರ ರಾತ್ರಿ ಆನೆಗಳ ಹಿಂಡು ನುಗ್ಗಿ ಅಪಾರ ಕೃಷಿ ಹಾನಿ ಮಾಡಿದೆ. ತೋಟದಲ್ಲಿದ್ದ ಬಾಳೆ, ಅಡಕೆ ಮರ, ತೆಂಗಿನ ಮರಗಳನ್ನು ನಾಶ ಮಾಡಿದೆ.