ನೀರು ತುಂಬಿದ್ದ ಬಕೆಟ್ ಗೆ ಬಿದ್ದು ಬಾಲಕ ಮೃತ್ಯು
Update: 2023-11-05 15:12 IST
ಸಾಂದರ್ಭಿಕ ಚಿತ್ರ (Photo: timesnownews.com)
ಥಾಣೆ: ಮನೆಯಲ್ಲಿನ ನೀರು ತುಂಬಿದ್ದ ಬಕೆಟ್ ಗೆ ಬಿದ್ದು ಬಾಲಕನೋರ್ವ ಮೃತಪಟ್ಟಿರುವ ಘಟನೆ ಶನಿವಾರ ಸಂಜೆ ನವಿಮುಂಬೈನಲ್ಲಿ ಸಂಭವಿಸಿದೆ.
ಪನ್ವೇಲ್ನ ಪಲಾಸ್ಪೆ ಗ್ರಾಮದಲ್ಲಿಯ ಮನೆಯಲ್ಲಿ ನೀರು ತುಂಬಿದ್ದ ಬಕೆಟ್ ಬಳಿ ಆಟವಾಡುತ್ತಿದ್ದ ಬಾಲಕ ಆಕಸ್ಮಿಕವಾಗಿ ಅದರಲ್ಲಿ ಬಿದ್ದಿದ್ದು, ಆತನ ಉಸಿರುಗಟ್ಟತೊಡಗಿತ್ತು. ಹೆತ್ತವರು ಆತನನ್ನು ತಕ್ಷಣ ಸಮೀಪದ ಆಸ್ಪತ್ರೆಗೆ ಸಾಗಿಸಿದ್ದರಾದರೂ ಆ ವೇಳೆಗಾಗಲೇ ಮೃತಪಟ್ಟಿದ್ದ ಎಂದು ಪೊಲೀಸರು ತಿಳಿಸಿದರು.