×
Ad

ಅಬಕಾರಿ ನೀತಿ ಪ್ರಕರಣ: ಅರವಿಂದ್ ಕೇಜ್ರಿವಾಲ್ ಗೆ ನಾಲ್ಕನೇ ಸಮನ್ಸ್ ಜಾರಿ

Update: 2024-01-13 11:16 IST

ಅರವಿಂದ್ ಕೇಜ್ರಿವಾಲ್ (PTI)

ಹೊಸದಿಲ್ಲಿ: ದಿಲ್ಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯವು ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ನಾಲ್ಕನೆ ಬಾರಿಗೆ ಸಮನ್ಸ್ ಜಾರಿಗೊಳಿಸಿದೆ. ಜನವರಿ 18ರಂದು ಜಾರಿ ನಿರ್ದೇಶನಾಲಯದೆದುರು ಹಾಜರಾಗುವಂತೆ ಅವರಿಗೆ ಸೂಚಿಸಲಾಗಿದೆ ಎಂದು ndtv.com ಸುದ್ದಿ ಸಂಸ್ಥೆ ವರದಿ ಮಾಡಿದೆ.

ಜಾರಿ ನಿರ್ದೇಶನಾಲಯದ ಸಮನ್ಸ್ ಕಾನೂನುಬಾಹಿರವಾಗಿದ್ದು, ಅದರ ಗುರಿ ನನ್ನನ್ನು ಬಂಧಿಸುವುದು ಮಾತ್ರ ಎಂದು ಆರೋಪಿಸಿ ಜನವರಿ 3ರಂದು ಅರವಿಂದ್ ಕೇಜ್ರಿವಾಲ್ ವಿಚಾರಣೆಗೆ ಗೈರಾಗಿದ್ದರು. ಅದರ ಬೆನ್ನಿಗೇ ಈಗಿನ ಸಮನ್ಸ್ ಜಾರಿಯಾಗಿದೆ.

ಇದಕ್ಕೂ ಮುನ್ನ, ನವೆಂಬರ್ 2 ಹಾಗೂ ಡಿಸೆಂಬರ್ 21ರಂದು ಜಾರಿ ನಿರ್ದೇಶನಾಲಯದಿಂದ ಜಾರಿಯಾಗಿದ್ದ ಸಮನ್ಸ್ ಗಳಿಗೂ ಆಮ್ ಆದ್ಮಿ ಪಕ್ಷದ ಮುಖ್ಯಸ್ಥರೂ ಆದ ಅರವಿಂದ್ ಕೇಜ್ರಿವಾಲ್ ಗೈರಾಗಿದ್ದರು.

ಜಾರಿ ನಿರ್ದೇಶನಾಲಯವು ಮೊದಲ ಸಮನ್ಸ್ ಜಾರಿಗೊಳಿಸಿದಾಗಿನಿಂದ ದಿಲ್ಲಿ ಮುಖ್ಯಮಂತ್ರಿಯಾದ ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಲಾಗುತ್ತದೆ ಎಂಬ ವದಂತಿಗಳು ಹರಿದಾಡುತ್ತಿವೆ.

ಕಳೆದ ವರ್ಷದ ಎಪ್ರಿಲ್ ತಿಂಗಳಿನಲ್ಲಿ ಅಬಕಾರಿ ನೀತಿ ಪ್ರಕರಣದಲ್ಲಿ ಅರವಿಂದ್ ಕೇಜ್ರಿವಾಲ್ ಅವರನ್ನು ಸಿಬಿಐ ವಿಚಾರಣೆಗೊಳಪಡಿಸಿತ್ತಾದರೂ, ಅವರನ್ನು ಆರೋಪಿಯನ್ನಾಗಿಸಿರಲಿಲ್ಲ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News