×
Ad

ಚೀನಾ ಗಡಿ ಸಮೀಪ ಬೋಧಿ ನದಿಯಲ್ಲಿ ಮುಳುಗಿದ ಮಿಲಿಟರಿ ಟ್ಯಾಂಕ್;‌ ನೀರಿನಲ್ಲಿ ಕೊಚ್ಚಿ ಹೋದ 5 ಸೈನಿಕರು

Update: 2024-06-29 12:04 IST

ಸಾಂದರ್ಭಿಕ ಚಿತ್ರ (PTI)

ಹೊಸದಿಲ್ಲಿ: ಲೇಹ್‌ನ ದೌಲತ್‌ ಬೇಗ್‌ ಓಲ್ಡಿ ಪ್ರದೇಶದ ಸಮೀಪವಿರುವ ವಾಸ್ತವಿಕ ನಿಯಂತ್ರಣ ರೇಖೆ ಪಕ್ಕದಲ್ಲಿ ಹರಿಯುತ್ತಿರುವ ನದಿ ದಾಟುತ್ತಿರುವಾಗ ಟ್ಯಾಂಕ್‌ ಒಂದು ಅಪಘಾತಕ್ಕೀಡಾಗಿ ಐದು ಮಂದಿ ಸೈನಿಕರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ತಕ್ಷಣ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದ್ದು ಓರ್ವ ಸೈನಿಕನ ಮೃತದೇಹ ಪತ್ತೆಯಾಗಿದೆ. ಉಳಿದ ನಾಲ್ಕು ಮಂದಿಗಾಗಿ ಶೋಧ ಮುಂದುವರಿದಿದೆ.

ನೀರುಪಾಲಾದವರಲ್ಲಿ ಓರ್ವ ಜೂನಿಯರ್‌ ಕಮಿಷನ್ಡ್‌ ಅಧಿಕಾರಿ ಕೂಡ ಇದ್ದಾರೆ. ಇಂದು ಮುಂಜಾನೆ ಸುಮಾರು 1 ಗಂಟೆ ವೇಳೆ ಈ ದುರ್ಘಟನೆ ನಡೆದಿದೆ.

ಸೈನಿಕರು ತರಬೇತಿ ಭಾಗವಾಗಿ ಮಂದಿರ್‌ ಮೋರ್ಹ್‌ ಸಮೀಪ ಬೋಧಿ ನದಿಯನ್ನು ತಮ್ಮ 1-72 ಟ್ಯಾಂಕ್‌ನಲ್ಲಿ ದಾಟುತ್ತಿದ್ದರು. ಆ ಸಂದರ್ಭದಲ್ಲಿ ದಿಢೀರ್‌ ಎಂದು ನೀರಿನ ಮಟ್ಟ ಏರಿಕೆಯಾಗಿದ್ದು ಟ್ಯಾಂಕ್‌ ನೀರಿನಲ್ಲಿ ಮುಳುಗಿದೆ. ಅಪಘಾತ ನಡೆದ ಸ್ಥಳ ಲೇಹ್‌ನಿಂದ 148 ಕಿಮೀ ದೂರದಲ್ಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News