×
Ad

ಪುತ್ರನ ಅಪಹರಣ ಪ್ರಕರಣದಲ್ಲಿ ಪೊಲೀಸರ ನಿಷ್ಕ್ರಿಯತೆ ಪ್ರತಿಭಟಿಸಿ ಆತ್ಮದಹನಕ್ಕೆ ಯತ್ನಿಸಿದ ತಂದೆ

Update: 2025-02-25 23:10 IST

Photo Credit | ANI

ಹೊಸದಿಲ್ಲಿ : ತನ್ನ ಪುತ್ರನನ್ನು ಥಾಯ್‌ ಲ್ಯಾಂಡ್‌ನಿಂದ ಅಪಹರಿಸಿ ಕಾಂಬೊಡಿಯಾ ಲಾವೊಸ್‌ಗೆ ಸಾಗಿಸಿದ ಪ್ರಕರಣಕ್ಕೆ ಸಂಬಂಧಿಸಿ ತಪ್ಪಿತಸ್ಥರ ವಿರುದ್ಧ ತಾನು ದೂರು ನೀಡಿದ್ದರೂ ಪೊಲೀಸರು ಕ್ರಮ ಕೈಗೊಂಡಿಲ್ಲವೆಂದು ಆರೋಪಿಸಿ ವ್ಯಕ್ತಿಯೊಬ್ಬರು ಜಿಲ್ಲಾ ನ್ಯಾಯಾಲಯದ ಎದುರು ತನಗೇ ತಾನೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಹರ್ಯಾಮದ ಯುಮುನಾ ನಗರದಲ್ಲಿ ಮಂಗಳವಾರ ನಡೆದಿದೆ.

ಆತ್ಮದಹನಕ್ಕೆ ಯತ್ನಿಸಿದ ವ್ಯಕ್ತಿಯನ್ನು ಕರಮ್‌ ವೀರ್ ಎಂದು ಗುರುತಿಸಲಾಗಿದ್ದು, ಆತನನ್ನು ಪಾದಚಾರಿಗಳು ಹಾಗೂ ಪತ್ರಕರ್ತರು ತಡೆದರೆಂದು ಮೂಲಗಳು ತಿಳಿಸಿವೆ. ಆನಂತರ ಸ್ಥಳಕ್ಕೆ ಆಗಮಿಸಿದ ಪೊಲೀಸರು ಕರಮ್ ವೀರ್‌ ನನ್ನು ವಶಕ್ಕೆ ತೆಗೆದುಕೊಂಡರು.

ತನ್ನ ಪುತ್ರನನ್ನು ಥೈಲ್ಯಾಂಡ್‌ನಲ್ಲಿ ಕಾಲ್‌ಸೆಂಟರ್ ಉದ್ಯೋಗಕ್ಕೆ ಕಳುಹಿಸಿದ್ದೆ. ಆದರೆ ಆತನನ್ನು ಅಲ್ಲಿಂದ ಲಾವೊಸ್‌ ಗೆ ಕೊಂಡೊಯ್ಯಲಾಗಿದೆ. ಅಲ್ಲಿ ಆತನನ್ನು ಬಲವಂತವಾಗಿ ಅಕ್ರಮ ವ್ಯವಹಾರಗಳಲ್ಲಿ ದುಡಿಸಲಾಗಿತ್ತು ಎಂದು ಯಮುನಾನಗರ ಜಿಲ್ಲೆಯತ ಪ್ರತಾಪಗಢ ಗ್ರಾಮದ ನಿವಾಸಿಯಾದ ಕರಮ್‌ವೀರ್ ಆರೋಪಿಸಿದ್ದನು.

ಈ ಬಗ್ಗೆ ಕರಮ್‌ವೀರ್‌ನ ಪತ್ನಿ ಪೊಲೀಸರಿಗೆ ಹೇಳಿಕೆ ನೀಡಿದ್ದು, ಲಾವೋಸ್‌ನಲ್ಲಿ ತನ್ನ ಪುತ್ರನನ್ನು ಅಪಹರಿಸಿದ ಏಜೆಂಟರುಗಳು ಆತನಿಂದ ಪಾಸ್‌ಪೋರ್ಟ್ ಕಸಿದುಕೊಂಡಿದ್ದರು. ತನ್ನ ಕುಟುಂಬವು 50 ಸಾವಿರ ರೂ. ಪಾವತಿಸಿದ ಬಳಿಕವಷ್ಟೇ ಆತನನ್ನು ಅಪಹರಣಕಾರರು ಬಿಡುಗಡೆಗೊಳಿಸಿದರೆಂದು ತಿಳಿಸಿದ್ದಾರೆ.

ಈ ಕೃತ್ಯಕ್ಕೆ ಕಾರಣರಾದ ಸ್ಥಳೀಯ ಏಜೆಂಟರುಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಪದೇ ಪದೇ ಮನವಿ ಮಾಡಿದರೂ ಪೊಲೀಸರು ಕಾರ್ಯಾಚರಿಸಲು ವಿಫಲರಾಗಿದ್ದಾರೆಂದು ಕರಮ್‌ವೀರ್ ಆಪಾದಿಸಿದ್ದಾನೆ.

ಕರಮ್‌ವೀರ್ ಫೆಬ್ರವರಿ 11ರಂದು ದೂರು ನೀಡಿದ್ದು, ಆನಂತರ ಪ್ರಕರಣವನ್ನು ಅರ್ಥಿಕ ಅಪರಾಧಗಳ ವಿಭಾಗಕ್ಕೆ ಹಸ್ತಾಂತರಿಸಲಾಗಿದೆ. ಪ್ರಕರಣದ ತನಿಖೆ ನಡೆಯುತ್ತಿದೆಯೆಂದು ಸ್ಥಳೀಯ ಠಾಣಾಧಿಕಾರಿ ರಜತ್ ಶರ್ಮಾ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News