×
Ad

ರಸ್ತೆ ಬದಿಯ ಢಾಬಾಗೆ ನುಗ್ಗಿದ ಲಾರಿ: ನಾಲ್ವರು ಮೃತ್ಯು

Update: 2023-09-22 09:03 IST

ಲಕ್ನೋ:  ವೇಗವಾಗಿ ಚಲಿಸುತ್ತಿದ್ದ ಟ್ರಕ್ ರಸ್ತೆ ಬದಿಯ ಢಾಬಾಗೆ ನುಗ್ಗಿದ ಪರಿಣಾಮವಾಗಿ ನಾಲ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ಉತ್ತರ ಪ್ರದೇಶದ ಹಾಪುರ ಜಿಲ್ಲೆಯ ದೌಲಾನಾದಿಂದ ವರದಿಯಾಗಿದೆ. ಚಾಲಕ ಮದ್ಯಪಾನ ಮಾಡಿದ್ದ ಎಂದು ಪೊಲೀಸರು ಹೇಳಿದ್ದು, ಆತನನ್ನು ಬಂಧಿಸಲಾಗಿದೆ.

ಮೃತರ ಪೈಕಿ ಇಬ್ಬರು ಬಿಹಾರ ಮೂಲದವರಾಗಿದ್ದು, ದಿನಗೂಲಿಗಳಾಗಿ ಕೆಲಸ ಮಾಡುತ್ತಿದ್ದರು. ತಮ್ಮ ಕೆಲಸ ಮುಗಿಸಿದ ಬಳಿಕ ರಾತ್ರಿ ಊಟ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ.

ಘಟನೆಯಲ್ಲಿ ಮೃತಪಟ್ಟ ಇತರ ಇಬ್ಬರು ಢಾಬಾ ನಿರ್ವಹಿಸುತ್ತಿದ್ದ ಅರುಣ್ ಚೌಹಾನ್ (28) ಮತ್ತು ಆತನ ಪಾಲುದಾರ ಅಳಿಯ ಜೀತು (17) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಗಾಯಗೊಂಡವರನ್ನು ಮೀರಠ್ ಆಸ್ಪತ್ರೆಗೆ ದಾಖಲಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News