×
Ad

1993 ಸರಣಿ ಸ್ಫೋಟ ಪ್ರಕರಣ: ಪ್ರಮುಖ ಆರೋಪಿ ಅಬ್ದುಲ್‌ ಕರೀಮ್‌ ʼತುಂಡಾʼ ಖುಲಾಸೆ

Update: 2024-02-29 16:34 IST

ಅಬ್ದುಲ್‌ ಕರೀಂ ʼತುಂಡಾʼ (PTI) 

ಜೈಪುರ್: ಆಜ್ಮೀರ್‌ನ ವಿಶೇಷ ನ್ಯಾಯಾಲಯವು 1993 ರಲ್ಲಿ ರೈಲುಗಳಲ್ಲಿ ನಡೆದ ಸರಣಿ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಅಬ್ದುಲ್‌ ಕರೀಂ ʼತುಂಡಾʼ ನನ್ನು ದೋಷಮುಕ್ತಗೊಳಿಸಿದೆ. ಈ ಪ್ರಕರಣದ ಇತರ ಇಬ್ಬರು ಆರೋಪಿಗಳಾದ ಇರ್ಫಾನ್‌ (70) ಹಾಗೂ ಹಮೀದುದ್ದೀನ್‌ (44) ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

ಲಕ್ನೋ, ಕಾನ್ಪುರ್‌, ಹೈದರಾಬಾದ್‌, ಸೂರತ್‌, ಮುಂಬೈನಲ್ಲಿ ಡಿಸೆಂಬರ್‌ 6, 1993 ರಂದು ನಡೆದ ಸರಣಿ ಸ್ಫೋಟ ಪ್ರಕರಣದ ಮೂವರು ಆರೋಪಿಗಳನ್ನು ಪೊಲೀಸರು ಬಿಗಿ ಭದ್ರತೆ ನಡುವೆ ಇಂದು ಟಾಡಾ ನ್ಯಾಯಾಲಯಕ್ಕೆ ಹಾಜರುಪಡಿಸಿದರು.

ಇರ್ಫಾನ್‌ ಮತ್ತು ಹಮೀದುದ್ದೀನ್‌ ಗೆ ನೀಡಲಾಗಿರುವ ಜೀವಾವಧಿ ಶಿಕ್ಷೆಯ ವಿರುದ್ಧ ಮೇಲ್ಮನವಿ ಸಲ್ಲಿಸಲಾಗುವುದು ಎಂದು ಅವರ ವಕೀಲರು ಹೇಳಿದ್ದಾರೆ. ಶೇ70ರಷ್ಟು ಪಾರ್ಶ್ವವಾಯು ಪೀಡಿತನಾಗಿರುವ ಇರ್ಫಾನ್‌ ಸುಮಾರು 17 ವರ್ಷದಿಂದ ಜೈಲಿನಲ್ಲಿದ್ದರೆ ಹಮೀದುದ್ದೀನ್‌ 14 ವರ್ಷದಿಂದ ಜೈಲಿನಲ್ಲಿದ್ದಾನೆ.

1993ರಲ್ಲಿ ನಡೆದ ಸರಣಿ ಸ್ಫೋಟ ಪ್ರಕರಣದಲ್ಲಿ ಇಬ್ಬರು ಮೃತಪಟ್ಟಿದ್ದರೆ ಹಲವಾರು ಮಂದಿ ಗಾಯಗೊಂಡಿದ್ದರು.

ಈ ಘಟನೆಗೆ ಸಂಬಂಧಿಸಿದ ಎಲ್ಲಾ ಪ್ರಕರಣಗಳನ್ನು ಒಗ್ಗೂಡಿಸಿ ಸಿಬಿಐ ಅಜ್ಮೇರ್‌ನ ಟಾಡಾ ನ್ಯಾಯಾಲಯಕ್ಕೆ 1994ರಲ್ಲಿ ಕಳಿಸಿತ್ತು. ಎಲ್ಲಾ ಆರೋಪಿಗಳು ಆಜ್ಮೀರ್‌ ಜೈಲಿನಲ್ಲಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News