×
Ad

ನೂಹ್‌ ಹಿಂಸಾಚಾರ ಪ್ರಕರಣದ ಆರೋಪಿ, ಜಾಮೀನಿನ ಮೇಲಿರುವ ಬಿಟ್ಟು ಬಜರಂಗಿಯಿಂದ ವ್ಯಕ್ತಿಗೆ ಹಲ್ಲೆ; ವೀಡಿಯೋ ವೈರಲ್‌

Update: 2024-04-03 12:25 IST

Photo: X \ @sumedhasharma86

ಹೊಸದಿಲ್ಲಿ: ಕಳೆದ ವರ್ಷ ಹರ್ಯಾಣಾದ ನೂಹ್‌ ಎಂಬಲ್ಲಿ ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿದ್ದ ಹಾಗೂ ಇತ್ತೀಚೆಗೆ ಜಾಮೀನಿನ ಮೇಳೆ ಬಿಡುಗಡೆಗೊಂಡಿದ್ದ ಬಿಟ್ಟು ಬಜರಂಗಿ ವ್ಯಕ್ತಿಯೊಬ್ಬನಿಗೆ ಕೋಲಿನಿಂದ ಬಾರಿಸುತ್ತಿರುವುದು ಹಾಗೂ ಆತನ ʼಗೋ ರಕ್ಷಕರ ತಂಡʼದ ಇತರ ಕೆಲವರು ಆ ವ್ಯಕ್ತಿಯನ್ನು ನೆಲಕ್ಕೆ ಬೀಳಿಸುತ್ತಿರುವುದು ವೀಡಿಯೋದಲ್ಲಿ ಸೆರೆಯಾಗಿದ್ದು ಅದೀಗ ವೈರಲ್‌ ಆಗಿದೆ. ಈ ಘಟನೆ ನಡೆಯುವಾಗ ಅಲ್ಲಿ ಪೊಲೀಸ್‌ ಸಿಬ್ಬಂದಿಯೊಬ್ಬರು ಮೂಕಪ್ರೇಕ್ಷಕರಾಗಿ ನಿಂತಿರುವುದೂ ಕಾಣಿಸಿದೆ.

ಈ ಸಂಬಂಧ ಇನ್ನೂ ಯಾವುದೇ ಪ್ರಕರಣ ದಾಖಲಿಸಲಾಗಿಲ್ಲ. ಪೊಲೀಸರ ಪ್ರಕಾರ ಈ ಘಟನೆ ಎಪ್ರಿಲ್‌ 1 ರಂದು ನಡೆದಿದೆ ಹಾಗೂ ಬಜರಂಗಿ ಫರೀದಾಬಾದ್‌ನ ಸರೂರ್‌ಪುರ್‌ ಎಂಬಲ್ಲಿನ ನಿವಾಸಿ ಶಮು ಎಂಬಾತನಿಗೆ ಥಳಿಸಿದ್ದಾನೆ. ಚಾಕಲೇಟ್‌ ಆಮಿಷವೊಡ್ಡಿ ನೆರೆಹೊರೆಯ ಇಬ್ಬರು ಬಾಲಕಿಯರನ್ನು ಪುಸಲಾಯಿಸಿ ತನ್ನ ಮನೆಗೆ ಈತ ಕರೆಸಿಕೊಂಡಿದ್ದನೆಂದು ಆರೋಪಿಸಲಾಗಿತ್ತು. ಕೆಲ ನೆರೆಹೊರೆಯ ಜನರು ಮನೆಗೆ ನುಗ್ಗಿ ಆತನನ್ನು ಸೆರೆಹಿಡಿದಿದ್ದರು. ಈ ವಿಚಾರ ಬಿಟ್ಟು ಬಜರಂಗಿಯ ತಂಡದ ಕಿವಿಗೂ ಮುಟ್ಟಿ ಅವರೂ ಅಲ್ಲಿಗೆ ಆಗಮಿಸಿ ಆ ವ್ಯಕ್ತಿಗೆ ಥಳಿಸಿದ್ದರು.

ಆರೋಪಿತ ಶಮು ಎಂಬಾತ ಪುಸಲಾಯಿಸಿ ತನ್ನ ಮನೆಗೆ ಕರೆಸಿಕೊಂಡಿದ್ದ ಬಾಲಕಿಯೊಬ್ಬಳ ತಾಯಿ ಕೂಡ ಆತನಿಗೆ ಥಳಿಸಿದ್ದಳು. ನಂತರ ಬಿಟ್ಟು ಬಜರಂಗಿ ಆತನಿಗೆ ಥಳಿಸಿದ್ದ ಎಂದು ಆರೋಪಿಸಲಾಗಿದೆ.

ಥಳಿಸಲ್ಪಟ್ಟ ವ್ಯಕ್ತಿ ಇನ್ನೂ ದೂರು ದಾಖಲಿಸಿಲ್ಲ, ಆತ ದೂರು ನೀಡದೇ ಇದ್ದರೂ ವೀಡಿಯೋ ಮೂಲಕ ಆರೋಪಿಗಳನ್ನು ಪತ್ತೆ ಹಚ್ಚಿ ಕ್ರಮಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News