ಆಚಾರ್ಯ ಪ್ರಶಾಂತ್ ರಿಗೆ ‘ಅತ್ಯಂತ ಪರಿಣಾಮಕಾರಿ ಪರಿಸರವಾದಿ’ ಪ್ರಶಸ್ತಿ
ಆಚಾರ್ಯ ಪ್ರಶಾಂತ್ | PC : ANI
ಹೊಸದಿಲ್ಲಿ: ವಿಶ್ವ ಪರಿಸರ ದಿನಾಚರಣೆಯ ಸಂದರ್ಭದಲ್ಲಿ ಗುರುವಾರ ದಾರ್ಶನಿಕ ಹಾಗೂ ಲೇಖಕ ಆಚಾರ್ಯ ಪ್ರಶಾಂತ್ ರಿಗೆ ಪ್ರತಿಷ್ಠಿತ ‘ಅತ್ಯಂತ ಪರಿಣಾಮಕಾರಿ ಪರಿಸರವಾದಿ’ ಪ್ರಶಸ್ತಿಯನ್ನು ನೀಡಲಾಗಿದೆ.
‘‘ಪರಿಸರ ಜಾಗೃತಿ ಮತ್ತು ಆಧ್ಯಾತ್ಮವನ್ನು ಬೆಸೆಯುವ ನಿಟ್ಟಿನಲ್ಲಿ ನೀಡಿರುವ ಮಹತ್ವದ ದೇಣಿಗೆ ಮತ್ತು ಸಹ್ಯ ಜೀವನ ವಿಧಾನವನ್ನು ಅನುಸರಿಸುವಂತೆ ಲಕ್ಷಾಂತರ ಜನರಿಗೆ ಪ್ರೇರಣೆ ನೀಡಿರುವುದಕ್ಕಾಗಿ ಗ್ರೀನ್ ಸೊಸೈಟಿ ಆಫ್ ಇಂಡಿಯಾ ಆಚಾರ್ಯ ಪ್ರಶಾಂತ್‌ರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಿದೆ.
‘‘ಪರಿಸರ ಬಿಕ್ಕಟ್ಟು ಹೊರಗಿಲ್ಲ, ನಮ್ಮೊಳಗಿದೆ. ನಮ್ಮ ಮನಸ್ಸು ದುರಾಶೆಯಿಂದ ಕುದಿಯುತ್ತಿರುವುದರಿಂದ ಹಿಮಪರ್ವತಗಳ ನೀರ್ಗಲ್ಲುಗಳು ಕರಗುತ್ತಿವೆ. ನಮ್ಮ ಬಯಕೆಗಳಿಗೆ ಮಿತಿ ಇಲ್ಲದಿರುವುದರಿಂದ ಸಮುದ್ರಗಳ ಮಟ್ಟ ಏರುತ್ತಿದೆ. ನಾವು ಜವಾಬ್ದಾರಿಯುತವಾಗಿ ಕ್ರಮ ತೆಗೆದುಕೊಳ್ಳುವ ಮುನ್ನ ನಾವು ಸ್ಪಷ್ಟವಾಗಿ ಯೋಚಿಸಬೇಕಾಗಿದೆ. ಆಗ ನಿಜವಾದ ಪರಿಸರವಾದ ಆರಂಭಗೊಳ್ಳುತ್ತದೆ. ಪರಿಸರವಾದ ನೀತಿಯಲ್ಲಿಲ್ಲ, ನಮ್ಮ ಪ್ರಜ್ಞೆಯಲ್ಲಿದೆ’’ ಎಂದು ಗ್ರೇಟರ್ ನೋಯ್ಡದಲ್ಲಿ ನಡೆದ ವಿಶ್ವ ಪರಿಸರ ಸಮ್ಮೇಳನ 2025ರಲ್ಲಿ ಅವರು ಹೇಳಿದ್ದರು.
ವೇದಾಂತ ಶಿಕ್ಷಕ ಹಾಗೂ ಪ್ರಶಾಂತ್ ಅದ್ವೈತ್ ಫೌಂಡೇಶನ್ ನ ಸ್ಥಾಪಕರಾಗಿರುವ ಆಚಾರ್ಯ ಪ್ರಶಾಂತ್ 160ಕ್ಕೂ ಹೆಚ್ಚಿನ ಪುಸ್ತಕಗಳನ್ನು ಬರೆದಿದ್ದಾರೆ.