×
Ad

ಅಡ್ಡಾದಿಡ್ಡಿ ಚಾಲನೆ: ನಟಿ ರವೀನಾ ಟಂಡನ್ ರಿಂದ ಮಹಿಳೆಯರ ಮೇಲೆ ಹಲ್ಲೆ; ಆರೋಪ

Update: 2024-06-02 13:22 IST

Screengrab:X/@mohsinofficail

ಮುಂಬೈ: ಜೂನ್ 1ರ ರಾತ್ರಿ ನಡೆದಿರುವ ರಸ್ತೆ ಅಪಘಾತದ ಘಟನೆಯಲ್ಲಿ ಬಾಲಿವುಡ್ ನಟಿ ರವೀನಾ ಟಂಡನ್ ರ ಚಾಲಕ ಅಡ್ಡಾದಿಡ್ಡಿ ಚಾಲನೆ ಮಾಡಿ, ಮೂವರು ಮಹಿಳೆಯರಿಗೆ ಡಿಕ್ಕಿ ಹೊಡೆದಿರುವ ಘಟನೆ ಮುಂಬೈನ ಬಾಂದ್ರಾದ ಕಾರ್ಟರ್ ರಸ್ತೆಯಲ್ಲಿ ನಡೆದಿದೆ ಎಂದು ಆರೋಪಿಸಲಾಗಿದೆ.

ಈ ಘಟನೆಯ ಬೆನ್ನಿಗೇ ಸಾರ್ವಜನಿಕರು ನಟಿ ರವೀನಾ ಟಂಡನ್ ಅವರ ಕಾರಿಗೆ ಮುತ್ತಿಗೆ ಹಾಕಿದ್ದಾರೆ.

ಘಟನೆಯ ನಂತರ ಕಾರಿನಿಂದ ಕೆಳಗಿಳಿದ ರವೀನಾ ಟಂಡನ್, ಗಾಯಾಳು ಮಹಿಳೆಯರಿಗೆ ಥಳಿಸಿದ್ದಾರೆ ಎಂದು ಗಾಯಾಳುಗಳ ಕುಟುಂಬದ ಸದಸ್ಯರು ಆರೋಪಿಸಿದ್ದಾರೆ. ಇದರಿಂದ ಕೆರಳಿರುವ ಸಾರ್ವಜನಿಕರು ಟಂಡನ್ ರನ್ನು ಬಾಯಿಗೆ ಬಂದಂತೆ ನಿಂದಿಸಿದ್ದಾರೆ ಎನ್ನಲಾಗಿದೆ. ಈ ಘಟನೆಯ ವಿಡಿಯೊ ಸದ್ಯ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಆ ವಿಡಿಯೊದಲ್ಲಿ, ನನಗೆ ಹೊಡೆಯಬೇಡಿ ಎಂದು ರವೀನಾ ಟಂಡನ್ ಬೇಡಿಕೊಳ್ಳುತ್ತಿರುವುದು ಸೆರೆಯಾಗಿದೆ.

ಘಟನೆಯ ಕುರಿತು ರವೀನಾ ಟಂಡನ್ ಇನ್ನಷ್ಟೆ ಹೇಳಿಕೆ ನೀಡಬೇಕಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News