×
Ad

ಅಲಿನಗರ ಖಂಡಿತವಾಗಿಯೂ ಸೀತಾನಗರವಾಗಲಿದೆ : ಮುನ್ನಡೆ ಸಾಧಿಸುತ್ತಿದ್ದಂತೆ ಕ್ಷೇತ್ರದ ಹೆಸರು ಬದಲಾವಣೆ ಬಗ್ಗೆ ಪುನರುಚ್ಛರಿಸಿದ ಬಿಜೆಪಿ ಅಭ್ಯರ್ಥಿ ಮೈಥಿಲಿ ಠಾಕೂರ್

Update: 2025-11-14 12:06 IST

ಮೈಥಿಲಿ ಠಾಕೂರ್ (Photo: NDTV)

ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಅಲಿನಗರ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವನ್ನು ಸಾಧಿಸಿದರೆ ಅಲಿನಗರವನ್ನು ಸೀತಾನಗರ ಎಂದು ಮರುನಾಮಕರಣ ಮಾಡುವುದಾಗಿ ಬಿಜೆಪಿ ಅಭ್ಯರ್ಥಿ ಮೈಥಿಲಿ ಠಾಕೂರ್ ಪುನರುಚ್ಚರಿಸಿದ್ದಾರೆ.

ಅಲಿನಗರದಲ್ಲಿ ಮೈಥಿಲಿ ಠಾಕೂರ್ ಮುನ್ನಡೆ ಸಾಧಿಸಿದ್ದಾರೆ. ಅವರ ಹಿಂದಿನ ಹೇಳಿಕೆಗಳ ಬಗ್ಗೆ ಕೇಳಿದಾಗ, ಗೆಲುವು ಸಾಧಿಸಿದ ನಂತರ ಕ್ಷೇತ್ರದ ಹೆಸರು ಬದಲಾವಣೆ ಖಚಿತ ಎಂದು ಹೇಳಿದರು.

ಈ ಚುನಾವಣೆಯಲ್ಲಿ ಅಲಿನಗರ ಕ್ಷೇತ್ರದ ಫಲಿತಾಂಶವನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ಮೈಥಿಲಿ ಠಾಕೂರ್ ಅವರ ಮುನ್ನಡೆ ಕ್ಷೇತ್ರದ ಹಸರು ಮರುನಾಮಕರಣದ ಪ್ರಸ್ತಾಪದ ಬಗ್ಗೆ ಚರ್ಚೆಯನ್ನು ಮತ್ತೆ ಮುನ್ನಲೆಗೆ ತಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News