×
Ad

ಅದಾನಿ ವಿರುದ್ಧದ ಆರೋಪಗಳನ್ನು ಸೂಕ್ತವಾಗಿ ತನಿಖೆ ನಡೆಸಲಾಗಿದೆ : ಸೆಬಿ

Update: 2024-08-11 22:25 IST

 ಸೆಬಿ| ಸಾಂದರ್ಭಿಕ ಚಿತ್ರ

ಮುಂಬೈ: ಅದಾನಿ ಸಮೂಹದ ವಿರುದ್ಧದ ಎಲ್ಲ ಆರೋಪಗಳನ್ನ ತನಿಖೆ ಮಾಡಲಾಗಿದೆ ಎಂದು ಮಾರುಕಟ್ಟೆ ನಿಯಂತ್ರಣ ಪ್ರಾಧಿಕಾರವಾದ ಸೆಬಿ ರವಿವಾರ ಸ್ಪಷ್ಟೀಕರಣ ನೀಡಿದೆ. ಅಮೆರಿಕ ಮೂಲದ ಕಿರು ಅವಧಿಯ ಮಾರಾಟ ಸಂಸ್ಥೆಯಾದ ಹಿಂಡೆನ್ ಬರ್ಗ್ ರಿಸರ್ಚ್ ನ ಇತ್ತೀಚಿನ ವರದಿಯ ನಂತರ ಸೆಬಿ ನೀಡಿರುವ ಪ್ರಪ್ರಥಮ ಹೇಳಿಕೆ ಇದಾಗಿದೆ.

ಸೆಬಿ ಮುಖ್ಯಸ್ಥೆ ಮಾಧಬಿ ಬುಚ್ ಅವರು ಕಾಲ ಕಾಲಕ್ಕೆ ಅಗತ್ಯ ವಿವರಗಳನ್ನು ಬಹಿರಂಗಗೊಳಿಸುವ ಮೂಲಕ ಪ್ರಬಲವಾದ ಹಿತಾಸಕ್ತಿ ಸಂಘರ್ಷದಲ್ಲಿ ಭಾಗಿಯಾಗುವುದರಿಂದ ತಮ್ಮನ್ನು ರಕ್ಷಿಸಿಕೊಂಡಿದ್ದಾರೆ ಎಂದು ಸೆಬಿ ತನ್ನ ಪ್ರಕಟಣೆಯಲ್ಲಿ ಹೇಳಿದೆ.

ಹಿಂಡೆನ್ ಬರ್ಗ್ ರಿಸರ್ಚ್ ಸಂಸ್ಥೆಯು ಅದಾನಿ ವಿರುದ್ಧ ಮಾಡಿದ್ದ ಆರೋಪಗಳನ್ನು ಸೂಕ್ತವಾಗಿ ತನಿಖೆ ಮಾಡಲಾಗಿದ್ದು, ಕೊನೆಯ 26 ತನಿಖೆಗಳು ಮುಕ್ತಾಯ ಹಂತವನ್ನು ಸಮೀಪಿಸಿವೆ ಎಂದು ಸೆಬಿ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News