×
Ad

ಅನುಪಮ್ ಖೇರ್ ಕಚೇರಿ ದರೋಡೆ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

Update: 2024-06-22 16:34 IST

ಅನುಪಮ್ ಖೇರ್ (Photo:PTI)

ಮುಂಬೈ: ಬಾಲಿವುಡ್ ನಟ ಅನುಪಮ್ ಖೇರ್ ಕಚೇರಿಯನ್ನು ದರೋಡೆ ಮಾಡಿದ್ದ ಇಬ್ಬರು ಆರೋಪಿಗಳನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನು ಮಜೀದ್ ಶೇಖ್ ಹಾಗೂ ಮುಹಮ್ಮದ್ ದಲೇರ್ ಬಹ್ರೀಂ ಖಾನ್ ಎಂದು ಗುರುತಿಸಲಾಗಿದೆ.

ಇಬ್ಬರೂ ಆರೋಪಿಗಳು ಮುಂಬೈ ನಗರದ ವಿವಿಧ ಪ್ರದೇಶಗಳಲ್ಲಿ ಸರಣಿ ಕಳ್ಳತನ ಮಾಡಿರುವ ಆರೋಪ ಎದುರಿಸುತ್ತಿದ್ದಾರೆ ಎಂದು ANI ಸುದ್ದಿ ಸಂಸ್ಥೆ ಟ್ವೀಟ್ ಮಾಡಿದೆ.

ಅನುಪಮ್ ಖೇರ್ ಕಚೇರಿಯ ದರೋಡೆ ಪ್ರಕರಣವು ಗುರುವಾರ ಬೆಳಗ್ಗೆ 9.45ರ ಸುಮಾರಿಗೆ ಬೆಳಕಿಗೆ ಬಂದಿತ್ತು. ಕಚೇರಿಯ ಸಿಬ್ಬಂದಿಗಳು ಕಚೇರಿ ಬಳಿಗೆ ಬಂದಾಗ, ಬಾಗಿಲಿನ ಬೀಗ ಒಡೆದಿರುವುದು ಕಂಡು ಬಂದಿತ್ತು.

ಆರೋಪಿಗಳು ಸುರಕ್ಷಿತ ಲಾಕರ್ ನಲ್ಲಿ ಇರಿಸಲಾಗಿದ್ದ ರೂ. 4.15 ಲಕ್ಷವನ್ನು ದರೋಡೆ ಮಾಡಿ ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News