×
Ad

ತಮಿಳುನಾಡು ಕುರಿತ ಹೇಳಿಕೆ ಪ್ರಕರಣ | ಪ್ರಾಮಾಣಿಕವಾಗಿ ಕ್ಷಮೆ ಕೇಳಿ ಅಥವಾ ಪ್ರಕರಣ ಎದುರಿಸಿ : ಶೋಭಾ ಕರಂದ್ಲಾಜೆಗೆ ಮದ್ರಾಸ್ ಹೈಕೋರ್ಟ್ ಸೂಚನೆ

Update: 2024-08-17 22:49 IST

PC :Facebook

ಹೊಸದಿಲ್ಲಿ : ಮಾರ್ಚ್ 1ರಂದು ಬೆಂಗಳೂರು ರಾಮೇಶ್ವರಂ ಕಫೆಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಭಾಗಿಯಾದವರು ತಮಿಳುನಾಡಿನಲ್ಲಿ ತರಬೇತು ಪಡೆದಿದ್ದಾರೆ ಎಂಬ ಹೇಳಿಕೆ ಕುರಿತಂತೆ ಪ್ರಾಮಾಣಿಕವಾಗಿ ಕ್ಷಮೆ ಯಾಚಿಸಬೇಕು ಅಥವಾ ಕ್ರಿಮಿನಲ್ ಪ್ರಕರಣ ಎದುರಿಸಬೇಕು ಎಂದು ಮದ್ರಾಸ್ ಉಚ್ಛ ನ್ಯಾಯಾಲಯ ಶುಕ್ರವಾರ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆಗೆ ತಿಳಿಸಿದೆ.

ಹೇಳಿಕೆಗೆ ಸಂಬಂಧಿಸಿದ ತನ್ನ ವಿರುದ್ಧ ದಾಖಲಿಸಲಾದ ಎಫ್‌ಐಆರ್ ಅನ್ನು ರದ್ದುಗೊಳಿಸುವಂತೆ ಕೋರಿ ಶೋಭಾ ಕರಂದ್ಲಾಜೆ ಸಲ್ಲಿಸಿದ ಅರ್ಜಿಯನ್ನು ಉಚ್ಛ ನ್ಯಾಯಾಲಯ ವಿಚಾರಣೆ ನಡೆಸಿತು.

ಆಗಸ್ಟ್ 7ರಂದು ನಡೆದ ಈ ಹಿಂದಿನ ವಿಚಾರಣೆಯಲ್ಲಿ ತಮಿಳುನಾಡಿನ ಅಡ್ವೊಕೇಟ್ ಜನರಲ್ ಪಿ.ಎಸ್ ರಾಮನ್, ಕರಂದ್ಲಾಜೆ ಅವರು ಪತ್ರಿಕಾಗೋಷ್ಠಿ ಆಯೋಜಿಸಿ ಹೇಳಿಕೆ ಕುರಿತಂತೆ ತಾನು ಸಿದ್ಧಪಡಿಸಿದ ಕರಡು ಕ್ಷಮಾಪಣೆ ಪತ್ರವನ್ನು ಓದಿದರೆ, ಅವರ ವಿರುದ್ಧದ ಕ್ರಿಮಿನಲ್ ಪ್ರಕರಣವನ್ನು ರದ್ದುಗೊಳಿಸಲು ಸಾಧ್ಯ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು.

ಅವರು ನೀಡಿರುವ ಕರಡು ಕ್ಷಮಾಪಣ ಪತ್ರದಲ್ಲಿ ಪದಗಳಿಗೆ ಸಂಬಂಧಿಸಿ ಸಂಸದೆಗೆ ಆಕ್ಷೇಪವಿದೆ ಎಂದು ಕರಂದ್ಲಾಜೆ ಪರವಾಗಿ ಹಾಜರಾಗಿದ್ದ ನ್ಯಾಯವಾದಿ ನ್ಯಾಯಾಲಯಕ್ಕೆ ತಿಳಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News