×
Ad

ಉತ್ತರ ಪ್ರದೇಶ | ಜನರು ವಿದ್ಯುತ್ ಸಮಸ್ಯೆ ಬಗ್ಗೆ ಹೇಳಿದಾಗ 'ಜೈ ಬಜರಂಗಬಲಿ' ಎಂದ ಇಂಧನ ಸಚಿವ! : ವೀಡಿಯೊ ವೈರಲ್

Update: 2025-07-10 18:05 IST

PC : X/@aksharmaBharat

ಲಕ್ನೋ: ಸುರಪುರಕ್ಕೆ ಭೇಟಿ ನೀಡಿದ್ದ ಉತ್ತರ ಪ್ರದೇಶ ಇಂಧನ ಸಚಿವ ಅರವಿಂದ್ ಕುಮಾರ್ ಶರ್ಮ ಅವರ ಬಳಿ ಜನರು ವಿದ್ಯುತ್ ಸರಬರಾಜು ಸಮಸ್ಯೆಯ ಬಗ್ಗೆ ಹೇಳಿದಾಗ, ಅವರು 'ಜೈ ಶ್ರೀ ರಾಮ್', 'ಜೈ ಬಜರಂಗಬಲಿ' ಎಂದು ಘೋಷಣೆ ಕೂಗಿ ಸ್ಥಳದಿಂದ ತೆರಳಿದ್ದಾರೆ ಎಂದು freepressjournal ವರದಿ ಮಾಡಿದೆ.

ಈ ಕುರಿತ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸುರಪುರಕ್ಕೆ ತೆರಳಿದ್ದ ಸಚಿವ ಅರವಿಂದ್ ಕುಮಾರ್ ಶರ್ಮ ಅವರಲ್ಲಿ ನಮ್ಮ ಪ್ರದೇಶದಲ್ಲಿ ಮೂರು ಗಂಟೆಗಳ ಕಾಲ ಮಾತ್ರ ವಿದ್ಯುತ್ ಪೂರೈಕೆಯಾಗುತ್ತಿದೆ ಎಂದು ಸ್ಥಳೀಯ ನಿವಾಸಿಗಳು ಹೇಳಿದ್ದಾರೆ.

ಈ ಸಮಸ್ಯೆಯನ್ನು ಪರಿಹರಿಸುವ ಭರವಸೆ ನೀಡುವ ಬದಲು, ಸಚಿವರು' ಜೈ ಶ್ರೀ ರಾಮ್', 'ಜೈ ಬಜರಂಗ ಬಲಿ' "ಬೋಲಿಯೆ ಶಂಕರ್ ಭಗವಾನ್ ಕಿ ಜೈʼ ಎಂದು ಹೇಳಿದ್ದಾರೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದೆ.

ಈ ಕುರಿತು ಟೀಕಿಸಿದ ಆಮ್ ಆದ್ಮಿ ಪಕ್ಷ, ಇದು ಉತ್ತರ ಪ್ರದೇಶ ಇಂಧನ ಸಚಿವರು ಹಾಗೂ ಪ್ರಧಾನಿ ಮೋದಿಯ ಆತ್ಮೀಯ ಸಹಚರ ಎ.ಕೆ. ಶರ್ಮಾಜೀ! ವಿದ್ಯುತ್ ಕಡಿತದ ಬಗ್ಗೆ ಜನರು ಅವರ ಬಳಿ ಸಮಸ್ಯೆಯನ್ನು ಹೇಳಿಕೊಂಡಿದ್ದಾರೆ. ಆದರೆ, ಅವರು ಸಮಸ್ಯೆಯನ್ನು ಪರಿಹರಿಸುವ ಬದಲು, ಕಾರಿನಲ್ಲಿ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಟೀಕಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News