ನ್ಯಾಕ್ ನ ನೂತನ ನಿರ್ದೇಶಕರಾಗಿ ಪ್ರೊ. ಗಣೇಶನ್ ಕಣ್ಣಬೀರನ್ ನೇಮಕ
Update: 2023-07-28 21:23 IST
Photo : ಗಣೇಶನ್ ಕಣ್ಣಬೀರನ್ | twitter
ಹೊಸದಿಲ್ಲಿ: ರಾಷ್ಟ್ರೀಯ ಮೌಲ್ಯಮಾಪನ ಹಾಗೂ ಮಾನ್ಯತಾ ಮಂಡಳಿ (ಎನ್ಎಎಸಿ)ಯ ನಿರ್ದೇಶಕರಾಗಿ ಶಿಕ್ಷಣ ತಜ್ಞ ಪ್ರೊ. ಗಣೇಶನ್ ಕಣ್ಣಬೀರನ್ ಅವರನ್ನು ನೇಮಕ ಮಾಡಲಾಗಿದೆ. ಈ ಬಗ್ಗೆ ಶುಕ್ರವಾರ ಪ್ರಕಟಿಸಿರುವ ನ್ಯಾಕ್, ಪ್ರೊ. ಕಣ್ಣಬೀರನ್ ಅವರು ಜುಲೈ 28ರಂದು ಅಧಿಕಾರ ವಹಿಸಲಿದ್ದಾರೆ ಎಂದು ಹೇಳಿದೆ. ತಿರುಚ್ಚಿಯ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಇನ್ಫಾರ್ಮೇಶನ್ ಸಿಸ್ಟಮ್ಸ್ನ ಹಳೆ ವಿದ್ಯಾರ್ಥಿ ಹಾಗೂ ಹಿರಿಯ ಪ್ರಾಧ್ಯಾಪಕರಾಗಿರುವ ಅವರಿಗೆ ಬೋಧನೆ, ಸಂಶೋಧನೆ ಹಾಗೂ ಆಡಳಿತದಲ್ಲಿ 30 ವರ್ಷಗಳ ಅನುಭವ ಇದೆ. ಅವರು ಎನ್ಐಟಿ ತಿರುಚಿ ಹಾಗೂ ಎನ್ಐಟಿ ಪುದಚೇರಿಯ ಸಂಶೋಧನೆ ಹಾಗೂ ಸಮಾಲೋಚನೆಯ ಡೀನ್ ಹಾಗೂ ಮೇಲ್ವಿಚರಣಾ ನಿರ್ದೇಶಕರಾಗಿದ್ದರು ಎಂದು ಅದು ಹೇಳಿದೆ.