×
Ad

ಇವಿಎಂ ನಿಷೇಧಿಸಿ,ಪ್ರಜಾಪ್ರಭುತ್ವ ಉಳಿಸಿ | ಹೀಗೊಂದು ಮದುವೆ ಆಮಂತ್ರಣ

Update: 2024-05-26 19:51 IST

PC : indianexpress.com

ಮುಂಬೈ: ಮದುವೆ ಆಮಂತ್ರಣ ಪತ್ರದಲ್ಲಿ ವ್ಯಕ್ತಿಯೊಬ್ಬರು ಇವಿಎಂ( ವಿದ್ಯುನ್ಮಾನ ಮತಯಂತ್ರ)ನಲ್ಲಿ ʼಇವಿಎಂ ನಿಷೇಧಿಸಿ,ಪ್ರಜಾಪ್ರಭುತ್ವ ಉಳಿಸಿʼ ಎಂದು, ಇವಿಎಂ ವಿರುದ್ಧ ಪ್ರತಿಭಟನಾ ಬರಹ ಮುದ್ರಿಸಿದ ಘಟನೆ ಮಹಾರಾಷ್ಟ್ರದ ಲಾತೂರ್‌ ಜಿಲ್ಲೆಯಲ್ಲಿ ನಡೆದಿದೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಚಾಕುರ್ ತಹಸೀಲ್ ನ ಅಜನ್ಸೊಂಡದ ನಿವಾಸಿ ದೀಪಕ್ ಕಾಂಬ್ಳೆ ಈ ಸಂದೇಶವನ್ನು ಆಹ್ವಾನ ಪತ್ರಿಕೆಯಲ್ಲಿ ಮುದ್ರಿಸಿದವರು ಎಂದು ತಿಳಿದು ಬಂದಿದೆ.

‘2024ರ ಲೋಕಸಭಾ ಚುನಾವಣೆಗೂ ಮುನ್ನವೇ ಈ ಚಳುವಳಿ ಆರಂಭವಾಗಿದೆ. ನಮ್ಮ ಸಂಬಂಧಿಕರು, ಸ್ನೇಹಿತರಲ್ಲಿ ಜಾಗೃತಿ ಮೂಡಿಸಲು ಸಣ್ಣ ಪ್ರಯತ್ನವಾಗಿ ಆಹ್ವಾನ ಪತ್ರಿಕೆಯಲ್ಲೇ ನನ್ನ ಪ್ರತಿಭಟನಾ ಪದಗಳನ್ನು ಮುದ್ರಿಸಿದೆ’ಎಂದು ಕಾಂಬ್ಳೆ ತಿಳಿಸಿದ್ದಾರೆ.

ಅಖಿಲ ಭಾರತ ಹಿಂದುಳಿದ(ಎಸ್‌ಸಿ,ಎಸ್‌ಟಿ ಮತ್ತು ಪಬೊಸೊ) ಮತ್ತು ಅಲ್ಪಸಂಖ್ಯಾತ ಸಮುದಾಯಗಳ ಒಕ್ಕೂಟ(ಬಿಎಎಂಸಿಎಎಫ್) ಸದಸ್ಯರಾಗಿರುವ ಕಾಂಬ್ಳೆ, ಸಮಾಜ ಸುಧಾರಕರು, ಸ್ವಾತಂತ್ರ್ಯ ಹೋರಾಟಗಾರರು ಮುಂತಾದವರ ಚಿತ್ರಗಳನ್ನು ಆಹ್ವಾನ ಪತ್ರಿಕೆಯಲ್ಲಿ ಮುದ್ರಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News