×
Ad

ಬಿಹಾರ: ಬಿಜೆಪಿಯ ಎರಡು ಗುಂಪುಗಳ ನಡುವೆ ಘರ್ಷಣೆ,ಗುಂಡು ಹಾರಾಟ

Update: 2023-06-25 23:02 IST

ಪಾಟ್ನಾ: ಬಿಜೆಪಿಯ ಜನಸಂಪರ್ಕ ಅಭಿಯಾನದ ಅಂಗವಾಗಿ ಬಿಹಾರದ ಮಾಧೇಪುರ ಜಿಲ್ಲೆಯ ಮುರ್ಲಿಗಾಂಗ್ನಲ್ಲಿ ರವಿವಾರ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಪಕ್ಷದ ನಾಯಕರ ಎರಡು ಗುಂಪುಗಳು ಪರಸ್ಪರ ದೊಣ್ಣೆ,ಕುರ್ಚಿಗಳಿಂದ ಹೊಡೆದಾಡಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಬಿಜೆಪಿಯ ಓರ್ವ ನಾಯಕ ಇನ್ನೋರ್ವ ನಾಯಕನತ್ತ ಗುಂಡು ಹಾರಿಸಿ ಗಾಯಗೊಳಿಸಿದ್ದಾನೆ.

ಗಾಯಾಳು ಸಂಜಯಕುಮಾರ ಭಗತ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು,ಆರೋಪಿ ನಾಯಕ ಪಂಕಜಕುಮಾರ ಪಟೇಲ್ರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದರು.

ಬಿಹಾರದ ಮಾಜಿ ಉಪಮುಖ್ಯಮಂತ್ರಿ ತಾರಕಿಶೋರ ಪ್ರಸಾದ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದರು,ಆದರೆ ಅವರ ಆಗಮನಕ್ಕೆ ಮೊದಲೇ ಸ್ಥಳವು ರಣಾಂಗಣದ ರೂಪ ಪಡೆದುಕೊಂಡಿತ್ತು

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News