ಬಿಹಾರ ವಿಧಾನ ಸಭೆ ಸ್ವೀಕರ್ ವಿರುದ್ಧದ ಅವಿಶ್ವಾಸ ನಿರ್ಣಯ ಅಂಗೀಕಾರ
Update: 2024-02-12 21:45 IST
ಅವಧ್ ಬಿಹಾರಿ ಚೌಧರಿ | Photo: scroll.in
ಪಾಟ್ನಾ: ಬಿಹಾರ ವಿಧಾನ ಸಭೆ ಸ್ಪೀಕರ್ ಅವಧ್ ಬಿಹಾರಿ ಚೌಧರಿ ವಿರುದ್ಧ ಆಡಳಿತಾರೂಢ ಎನ್ ಡಿ ಎ ಮಂಡಿಸಿದ ಅವಿಶ್ವಾಸ ನಿರ್ಣಯ ವಿಧಾನ ಸಭೆಯಲ್ಲಿ ಸೋಮವಾರ ಅಂಗೀಕಾರಗೊಂಡಿದೆ.
ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ‘ಮಹಾಘಟಬಂಧನ್’ನಿಂದ ಮೈತ್ರಿ ತೊರೆದ ಹಾಗೂ ಬಿಜೆಪಿ ನೇತೃತ್ವದ ಮೈತ್ರಿಕೂಟಕ್ಕೆ ಮರಳಿದ ಮೂರು ವಾರಗಳ ಬಳಿಕ ಅವಧ್ ಬಿಹಾರಿ ಚೌಧರಿ ಅವರ ಆರ್ಜೆಡಿ ಪಕ್ಷ ಕೂಡ ಅಧಿಕಾರ ಕಳೆದುಕೊಂಡಿದೆ. ಆದರೆ, ಅವಧ್ ಬಿಹಾರಿ ಚೌಧರಿ ಅವರು ಸ್ವೀಕರ್ ಹುದ್ದೆಯಿಂದ ಕೆಳಗಿಳಿಯಲು ನಿರಾಕರಿಸಿದ್ದರು. ಆದುದರಿಂದ ಹೊಸ ಸರಕಾರ ಅವಿಶ್ವಾಸ ನಿರ್ಣಯ ಮಂಡಿಸಿತು.
ಅವಧ್ ಬಿಹಾರಿ ಚೌಧರಿ ವಿರುದ್ಧ ಬಿಜೆಪಿ ಶಾಸಕ ನಂದಕಿಶೋರ್ ಯಾದವ್ ಅವರು ಅವಿಶ್ವಾಸ ನಿರ್ಣಯ ಮಂಡಿಸಿದರು. ಈ ನಿರ್ಣಯದ ಪರ 125 ಶಾಸಕರು ಹಾಗೂ ವಿರುದ್ಧ 112 ಮಂದಿ ಮತ ಚಲಾಯಿಸಿದರು.