ವಿಪಕ್ಷಗಳ ವೈಫಲ್ಯದಿಂದ ಬಿಜೆಪಿ ನಿರಂತರವಾಗಿ ಗೆಲುವು ಸಾಧಿಸುತ್ತಿದೆ: ಅಸದುದ್ದೀನ್ ಉವೈಸಿ
ಸಂಸದ ಅಸದುದ್ದೀನ್ ಉವೈಸಿ (PTI)
ಹೈದರಾಬಾದ್: ವಿರೋಧ ಪಕ್ಷವು ವಿಫಲವಾಗಿರುವುದರಿಂದ, ಬಿಜೆಪಿಯು ಹಿಂದೂ ಮತಗಳನ್ನು ಕ್ರೋಢೀಕರಿಸಿರುವುದರಿಂದ ನಿರಂತರವಾಗಿ ಚುನಾವಣೆಗಳನ್ನು ಗೆಲ್ಲುತ್ತಿದೆ ಎಂದು ಹೈದರಾಬಾದ್ ಸಂಸದ ಅಸದುದ್ದೀನ್ ಉವೈಸಿ ಹೇಳಿದ್ದಾರೆ.
ಮೋದಿ ವಿರೋಧಿ ಮತಗಳನ್ನು ಉವೈಸಿ ಒಡೆಯುತ್ತಾರೆ ಎಂಬ ಹೇಳಿಕೆಗಳನ್ನು ಅವರು ಅಲ್ಲಗೆಳೆದಿದ್ದಾರೆ.
ಪಿಟಿಐ ವೀಡಿಯೊಗೆ ನೀಡಿದ ಸಂದರ್ಶನದಲ್ಲಿ ಅವರು ಮಾತನಾಡಿದರು.
"ನೀವು ನನ್ನ ಮೇಲೆ ಹೇಗೆ ಆರೋಪ ಹೊರಿಸುತ್ತೀರಿ ಹೇಳಿ? ನಾನು 2024 ರ ಸಂಸತ್ ಚುನಾವಣೆಯಲ್ಲಿ ಹೈದರಾಬಾದ್, ಔರಂಗಾಬಾದ್, ಕಿಶನ್‌ಗಂಜ್ ಮತ್ತು ಇತರ ಕೆಲವು ಕಡೆಗಳಲ್ಲಿ ಸ್ಪರ್ಧಿಸಿದರೆ ಮತ್ತು ಬಿಜೆಪಿ 240 ಸ್ಥಾನಗಳನ್ನು ಪಡೆದರೆ ನಾನು ಜವಾಬ್ದಾರನಾ?"ಎಂದು ಉವೈಸಿ ಪ್ರಶ್ನಿಸಿದ್ದಾರೆ.
"ವಿರೋಧ ಪಕ್ಷ ವಿಫಲವಾಗಿದೆ ಎಂಬ ಕಾರಣಕ್ಕಾಗಿ ಬಿಜೆಪಿ ಅಧಿಕಾರಕ್ಕೆ ಬರುತ್ತಿದೆ. ಬಿಜೆಪಿ ಸುಮಾರು ಶೇಕಡಾ 50 ರಷ್ಟು ಹಿಂದೂ ಮತಗಳನ್ನು ಕ್ರೋಢೀಕರಿಸಿರುವುದರಿಂದ ಚುನಾವಣೆಗಳನ್ನು ಗೆಲ್ಲುತ್ತಿದೆ" ಎಂದು ಅವರು ಹೇಳಿದರು
ಉವೈಸಿ ಅವರನ್ನು ದೂಷಿಸಲು ಮತ್ತು ಅವರನ್ನು ಬಿಜೆಪಿಯ ಬಿ-ಟೀಮ್ ಎಂದು ಕರೆಯಲು ಪ್ರಯತ್ನಿಸುತ್ತಿರುವುದು ಅವರ ಪಕ್ಷದ ಮೇಲಿನ ವಿರೋಧ ಪಕ್ಷದ ದ್ವೇಷವನ್ನು ಹೊರತುಪಡಿಸಿ ಬೇರೇನೂ ಅಲ್ಲ. ಏಕೆಂದರೆ ತಮ್ಮ ಪಕ್ಷವು ಹೆಚ್ಚಾಗಿ ಮುಸ್ಲಿಮರನ್ನು ಪ್ರತಿನಿಧಿಸುತ್ತದೆ ಎಂದು ಅಸದುದ್ದೀನ್ ಉವೈಸಿ ಪ್ರತಿಪಾದಿಸಿದರು.