ಲೋಕಸಭೆಯಲ್ಲಿ ಮಸೂದೆ ಮಂಡನೆ ವೇಳೆ ಗದ್ದಲ; ಬಿಜೆಪಿ ನಾಯಕರಿಂದ ಮಹಿಳಾ ಸಂಸದರ ಮೇಲೆ ಹಲ್ಲೆ: ಟಿಎಂಸಿ ಆರೋಪ
Update: 2025-08-20 20:19 IST
ಮಿತಾಲಿ ಬಾಗ್(ANI) , ಶತಾಬ್ದಿ ರಾಯ್ (@sansad_tv)
ಹೊಸದಿಲ್ಲಿ, ಆ. 20: ನಿರಂತರ 30 ದಿನಗಳ ಕಾಲ ಜೈಲಿನಲ್ಲಿದ್ದರೆ ಪ್ರಧಾನಿ, ಮುಖ್ಯಮಂತ್ರಿಗಳು ಮತ್ತು ಸಚಿವರನ್ನು ಹುದ್ದೆಯಿಂದ ವಜಾಗೊಳಿಸಲು ಅವಕಾಶ ನೀಡುವ ಮೂರು ಮಸೂದೆಗಳನ್ನು ಬುಧವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಲೋಕಸಭೆಯಲ್ಲಿ ಮಂಡಿಸಿದಾಗ ಉಂಟಾದ ಗದ್ದಲದ ವೇಳೆ, ಬಿಜೆಪಿ ನಾಯಕರಾದ ಕಿರಣ್ ರಿಜಿಜು ಮತ್ತು ರವನೀತ್ ಸಿಂಗ್ ಬಿಟ್ಟು ತೃಣಮೂಲ ಕಾಂಗ್ರೆಸ್ ಪಕ್ಷದ ಮಹಿಳಾ ಸಂಸದರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಪಕ್ಷ ಆರೋಪಿಸಿದೆ.
‘‘ನಮ್ಮನ್ನು ತಳ್ಳಿ ತಮಾಷೆ ಮಾಡಲಾಯಿತು’’ ಎಂದು ಟಿ ಎಮ್ ಸಿ ಯ ಮಿತಾಲಿ ಬಾಗ್ ಮತ್ತು ಶತಾಬ್ದಿ ರಾಯ್ ಆರೋಪಿಸಿದ್ದಾರೆ.
ಮೂರು ಮಸೂದೆಗಳನ್ನು ಅಮಿತ್ ಶಾ ಲೋಕಸಭೆಯಲ್ಲಿ ಮಂಡಿಸಿದಾಗ ಪ್ರತಿಪಕ್ಷಗಳು ಉಗ್ರ ಪ್ರತಿಭಟನೆ ನಡೆಸಿದವು. ಆಗ ಉಂಟಾದ ಗದ್ದಲದ ವೇಳೆ ಕಿರಣ್ ರಿಜಿಜು ಮತ್ತು ರವನೀತ್ ಸಿಂಗ್ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್ ನ ಇಬ್ಬರು ಮಹಿಳಾ ಸಂಸದರು ಹೇಳಿದ್ದಾರೆ.