×
Ad

25 ಲಕ್ಷ ರೂ. ವಂಚನೆ ಪ್ರಕರಣ: ನಟ ಗೋವಿಂದ, ಬಿಜೆಪಿ ಸಂಸದ ಮನೋಜ್ ತಿವಾರಿ ಹೆಸರು ಉಲ್ಲೇಖ

Update: 2026-02-02 20:21 IST

ನಟ ಗೋವಿಂದ , ಮನೋಜ್ ತಿವಾರಿ | Photo Credit ; PTI 

ಹೊಸದಿಲ್ಲಿ: ಗಾಝಿಯಾಬಾದ್ ಮೂಲದ ಮ್ಯಾಕ್ಸಿಝೋನ್ ಟಚ್ ಪ್ರೈವೇಟ್ ಲಿಮಿಟೆಡ್ ನಲ್ಲಿ ನಡೆದಿದ್ದ ಹೂಡಿಕೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಎಫ್ಐಆರ್ ನಲ್ಲಿ ಬಿಜೆಪಿ ಸಂಸದ ಮನೋಜ್ ತಿವಾರಿ ಸೇರಿದಂತೆ ಬಾಲಿವುಡ್ ನಟರಾದ ಗೋವಿಂದ, ಶಕ್ತಿ ಕಪೂರ್ ಹಾಗೂ ಚಂಕಿ ಪಾಂಡೆ ಹೆಸರುಗಳು ಉಲ್ಲೇಖವಾಗಿವೆ ಎಂದು ವರದಿಯಾಗಿದೆ.

ನಕಲಿ ಹೂಡಿಕೆ ಯೋಜನೆಯ ಮೂಲಕ ಮ್ಯಾಕ್ಸಿಝೋನ್ ಟಚ್ ಪ್ರೈವೇಟ್ ಲಿಮಿಟೆಡ್ ಕಂಪನಿ ನಮ್ಮನ್ನು ವಂಚಿಸಿದೆ ಎಂದು ಹಲವಾರು ಹೂಡಿಕೆದಾರರು ಆರೋಪ ಮಾಡಿದ ಹಿನ್ನೆಲೆಯಲ್ಲಿ ಎಫ್ಐಆರ್ ದಾಖಲಾಗಿದೆ. Deccan Herald ವರದಿಯ ಪ್ರಕಾರ, ಈ ವಂಚನೆಯ ಮೊತ್ತ 25 ಲಕ್ಷ ರೂ. ಆಗಿದ್ದು, ಈ ವಂಚನೆಯು ಬೃಹತ್ ಪ್ರಮಾಣದ ಹೂಡಿಕೆ ಹಾಗೂ 600 ಕೋಟಿ ರೂ. ಮೌಲ್ಯದ ಕ್ರಿಪ್ಟೊಕರೆನ್ಸಿ ವಂಚನೆಯೊಂದಿಗೆ ಸಂಬಂಧ ಹೊಂದಿದೆ ಎನ್ನಲಾಗಿದೆ.

ವಂಚನೆಗೊಳಗಾದ ಹೂಡಿಕೆದಾರ ಜಸ್ಪಾಲ್ ಸಿಂಗ್ ಎಂಬವರು ನೀಡಿದ ದೂರನ್ನು ಆಧರಿಸಿ ಈ ಎಫ್ಐಆರ್ ದಾಖಲಾಗಿದೆ. ಹೂಡಿಕೆದಾರರಿಗೆ ಶೇ. 15ರಷ್ಟು ಡಿವಿಡೆಂಡ್ ನೀಡಲಾಗುವುದು ಎಂದು ಭರವಸೆ ನೀಡಲಾಗಿತ್ತು. ಆದರೆ, ಹೂಡಿಕೆದಾರರು ಬಡ್ಡಿಯನ್ನೂ ಪಡೆದಿಲ್ಲ ಅಥವಾ ಮೂಲ ಬಂಡವಾಳವನ್ನೂ ಹಿಂಪಡೆದಿಲ್ಲ ಎಂದು ಅವರು ಆರೋಪಿಸಿದ್ದಾರೆ.

ಬಾಲಿವುಡ್ ನಟರು ಈ ಹೂಡಿಕೆಯ ಪ್ರಚಾರ ಮಾಡಿ, ಈ ಯೋಜನೆಯತ್ತ ತುಂಬಾ ಜನರನ್ನು ಸೆಳೆದಿದ್ದರು ಎಂದೂ ದೂರಿನಲ್ಲಿ ಆರೋಪಿಸಲಾಗಿದೆ.

ಈ ದೂರಿಗೆ ಸಂಬಂಧಿಸಿದಂತೆ ಸೆಪ್ಟೆಂಬರ್ 2025ರಲ್ಲಿ ಮ್ಯಾಕ್ಸಿಝೋನ್ ಟಚ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ನಿರ್ದೇಶಕರಾದ ಚಂದರ್ ಭೂಷಣ್ ಸಿಂಗ್ ಹಾಗೂ ಅವರ ಪತ್ನಿ ಪ್ರಿಯಾಂಕಾ ಸಿಂಗ್ ಅವರನ್ನು ಬಂಧಿಸಲಾಗಿತ್ತು ಎಂದು ವರದಿಗಳು ಹೇಳಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News