×
Ad

ಚಂಡೀಗಢ ಮೇಯರ್ ಆಗಿ ಬಿಜೆಪಿಯ ಹರ್ ಪ್ರೀತ್ ಕೌರ್ ಆಯ್ಕೆ

Update: 2025-01-30 16:20 IST

ಹರ್ ಪ್ರೀತ್ ಕೌರ್ ಬಬ್ಲಾ (Photo: indiatoday.in)

ಹೊಸದಿಲ್ಲಿ : ಚಂಡೀಗಢ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಹರ್ ಪ್ರೀತ್ ಕೌರ್ ಬಬ್ಲಾ ಮೇಯರ್ ಆಗಿ ಆಯ್ಕೆಯಾಗಿದ್ದು, INDIA ಮೈತ್ರಿಕೂಟದ ಅಭ್ಯರ್ಥಿ ತರುಣಾ ಮೆಹ್ತಾ ಉಪಮೇಯರ್ ಆಗಿ ಆಯ್ಕೆಯಾಗಿದ್ದಾರೆ.

36 ಸದಸ್ಯ ಬಲದ ಚಂಡೀಗಢ ಮಹಾನಗರ ಪಾಲಿಕೆಯಲ್ಲಿ ಮೇಯರ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಹರ್ಪ್ರೀತ್ ಕೌರ್ ಬಬ್ಲಾ ಅವರು 19 ಮತಗಳನ್ನು ಪಡೆದು ಗೆಲುವು ಸಾಧಿಸಿದರೆ, ಕಾಂಗ್ರೆಸ್ ಬೆಂಬಲಿತ ಆಮ್ ಆದ್ಮಿ ಪಕ್ಷದ(ಎಎಪಿ) ಅಭ್ಯರ್ಥಿ ಪ್ರೇಮ್ ಲತಾ ಅವರು 17 ಮತಗಳನ್ನು ಪಡೆದಿದ್ದಾರೆ. ಪ್ರತಿಪಕ್ಷ INDIA ಮೈತ್ರಿಕೂಟದ ಮೂವರು ಕೌನ್ಸಿಲರ್ ಗಳು ಬಿಜೆಪಿ ಪರವಾಗಿ ಅಡ್ಡ ಮತದಾನ ಮಾಡಿದ್ದಾರೆ.

ಚುನಾವಣೆಗೂ ಮುನ್ನ 19 ಕೌನ್ಸಿಲರ್‌ ಗಳನ್ನು ಹೊಂದಿದ್ದ ಎಎಪಿ-ಕಾಂಗ್ರೆಸ್ ಮೈತ್ರಿಕೂಟಕ್ಕೆ ಫಲಿತಾಂಶ ಹಿನ್ನೆಡೆಯಾಗಿದೆ. ಚಂಡೀಗಢ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ 16 ಕೌನ್ಸಿಲರ್ ಗಳನ್ನು ಹೊಂದಿತ್ತು. ಅಡ್ಡ ಮತದಾನದಿಂದಾಗಿ ಬಿಜೆಪಿ ಅಭ್ಯರ್ಥಿ ಗೆಲುವನ್ನು ಸಾಧಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News