×
Ad

ಹೊಸದಿಲ್ಲಿ: ಪ್ರಶಾಂತ್ ವಿಹಾರ್ ನ ಪಿವಿಆರ್ ಬಳಿ ಸ್ಪೋಟ, ಸ್ಥಳಕ್ಕೆ ಪೊಲೀಸರು ದೌಡು

Update: 2024-11-28 13:29 IST

Photo credit: indiatoday.in

ಹೊಸದಿಲ್ಲಿ: ಉತ್ತರ ದಿಲ್ಲಿಯ ಪ್ರಶಾಂತ್ ವಿಹಾರ್ ನಲ್ಲಿರುವ ಪಿವಿಆರ್ ಮಲ್ಟಿಪ್ಲೆಕ್ಸ್ ಬಳಿಯಲ್ಲಿನ ಸ್ವೀಟ್ ಅಂಗಡಿಯಲ್ಲಿ ಗುರುವಾರ ಭಾರೀ ಸ್ಫೋಟದ ಸದ್ದು ಕೇಳಿಬಂದಿದ್ದು, ಸ್ಥಳಕ್ಕೆ ಪೊಲೀಸರು ಮತ್ತು ಅಗ್ನಿಶಾಮಕದಳದ ಸಿಬ್ಬಂದಿಗಳು ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ.

ಸ್ಫೋಟದ ಬಗ್ಗೆ ಬಂದ ಕರೆಯನ್ನು ಪರಿಶೀಲಿಸಲಾಗುತ್ತಿದೆ ಮತ್ತು ಸ್ಫೋಟದ ಕಾರಣದ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ಪ್ರಶಾಂತ್ ವಿಹಾರ್ ಪ್ರದೇಶದಿಂದ ಇಂದು ಬೆಳಗ್ಗೆ 11.48ಕ್ಕೆ ಸ್ಫೋಟದ ಬಗ್ಗೆ ಕರೆ ಬಂದಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ತೆರಳಿದ್ದಾರೆ ಎಂದು ದಿಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿಗಳು ಮಾಹಿತಿ ನೀಡಿದ್ದಾರೆ. ಇದಲ್ಲದೆ ಸ್ಫೋಟ ಸಂಭವಿಸಿದ ಸ್ಥಳದಲ್ಲಿ ಬಿಳಿ ಪುಡಿಯಂತಹ ವಸ್ತುಗಳು ಪತ್ತೆಯಾಗಿದೆ ಎಂದು INDIA TODAY ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News