×
Ad

ಅಂಧ ವಿದ್ಯಾರ್ಥಿ ಮುಹಮ್ಮದ್ ಸಮರ್ ಗೆ ಅಲಿಗಢ ಮುಸ್ಲಿಂ ವಿವಿಯಿಂದ ಪಿಎಚ್‌ಡಿ ಕಿರೀಟ

Update: 2025-03-15 16:07 IST

ಮುಹಮ್ಮದ್ ಸಮರ್ (Photo credit: Times of India)

ಲಕ್ನೋ: ಉರ್ದು ವಿಭಾಗದಲ್ಲಿ ಪಿಎಚ್ಡಿ ವ್ಯಾಸಂಗ ಪೂರ್ಣಗೊಳಿಸಿರುವ ಉತ್ತರ ಪ್ರದೇಶದ ಅಂಧ ವಿದ್ಯಾರ್ಥಿ ಮುಹಮ್ಮದ್ ಸಮರ್ ಅವರಿಗೆ ಅಲಿಗಢ ಮುಸ್ಲಿಂ ವಿಶ್ವ ವಿದ್ಯಾಲಯವು ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ಈ ಮೂಲಕ ಅಲಿಗಢ ವಿವಿಯಲ್ಲಿ ಪಿಎಚ್ಡಿ ಪದವಿ ಪಡೆದ ಮೊದಲ ಪುರುಷ ಅಂಧ ವಿದ್ಯಾರ್ಥಿ ಎಂಬ ಗರಿಮೆಗೂ ಸಮರ್ ಪಾತ್ರರಾಗಿದ್ದಾರೆ.

ಸಾಧಿಸುವ ಛಲವಿದ್ದರೆ ಯಾವ ನ್ಯೂನತೆಯೂ ಅಡ್ಡಿಯಾಗದು ಎಂಬುದನ್ನು ಉತ್ತರ ಪ್ರದೇಶದ ಅಂಧ ವಿದ್ಯಾರ್ಥಿ ಮುಹಮ್ಮದ್ ಸಮರ್ ನಿರೂಪಿಸಿದ್ದಾರೆ.

ಅಲಿಗಢದ ಉಪಾರ್ಕೋಟ್ ಮೂಲದವರಾದ ಸಮರ್ ಗೆ ಉಪನ್ಯಾಸಕರಾಗಿ ಸೇವೆ ಮಾಡುವ ಇರಾದೆಯಿದೆ. ಆ ಮೂಲಕ ದೃಷ್ಟಿ ಹೀನರಿಗೆ ಜ್ಞಾನ ಹಂಚುವ ಆಸೆ ಹೊಂದಿರುವುದಾಗಿ ಅವರು ಹೇಳಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News