×
Ad

ಬಿಸಿಲಾಘಾತಕ್ಕೆ ಬಾಲಿವುಡ್‌ ನಟ ಶಾರುಕ್‌ ಖಾನ್‌ ಅಸ್ವಸ್ಥ ; ಆಸ್ಪತ್ರೆಗೆ ದಾಖಲು

Update: 2024-05-22 20:28 IST

ಶಾರುಕ್‌ ಖಾನ್‌ | PC ; ANI  

ಅಹ್ಮದಾಬಾದ್‌: ಬಿಸಿಲಾಘಾತಕ್ಕೆ ಒಳಗಾಗಿ ಬಾಲಿವುಡ್‌ ನಟ ಶಾರುಕ್‌ ಖಾನ್‌ ಅಸ್ವಸ್ಥರಾಗಿದ್ದು, ಅವರನ್ನು ಬುಧವಾರ ಅಹ್ಮದಾಬಾದ್‌ನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಮಂಗಳವಾರ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ಐಪಿಎಲ್ ಪಂದ್ಯದ ವೇಳೆ ಬಿಸಿ ಗಾಳಿಯಿಂದಾಗಿ ಶಾರುಕ್‌ ಖಾನ್ ಅನಾರೋಗ್ಯಕ್ಕೆ ಒಳಗಾಗಿದ್ದಾರೆ ಎಂದು ತಿಳಿದು ಬಂದಿದೆ.

ಐಪಿಎಲ್‌ ನ ಮೊದಲ ಪ್ಲೇ ಆಫ್ ಪಂದ್ಯದಲ್ಲಿ ತಮ್ಮ ಒಡೆತನದ ಕೆಕೆಆರ್‌ ತಂಡವನ್ನು ಬೆಂಬಲಿಸಲು ಶಾರುಕ್‌ ಖಾನ್ ಅಹ್ಮದಾಬಾದ್‌ಗೆ ಭೇಟಿ ನೀಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News