×
Ad

ರಸ್ತೆಯಲ್ಲಿ ಕುಳಿತಿದ್ದ ವ್ಯಕ್ತಿಯ ಮೇಲೆ ಹರಿದ ಕಾರು: ವೀಡಿಯೊ ವೈರಲ್‌ ಆದ ಬಳಿಕ ಆರೋಪಿ ಬಂಧನ

ಬಿಜೆಪಿ ಚಿಹ್ನೆ ಇರುವ ಕಾರೊಂದನ್ನು ವ್ಯಕ್ತಿಯೊಬ್ಬನ ಮೇಲೆ ಚಲಾಯಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Update: 2023-07-19 15:09 IST

Photo : Twitter/@purusharthlive

ಗಾಝಿಯಾಬಾದ್‌: ವ್ಯಕ್ತಿಯ ಮೇಲೆ ಕಾರು ಹತ್ತಿಸಿ ಹೋದ ವ್ಯಕ್ತಿಯನ್ನು ಗಾಝಿಯಾಬಾದ್‌ ಪೊಲೀಸರು ಬಂಧಿಸಿದ್ದು, ಆತ ಚಲಾಯಿಸುತ್ತಿದ್ದ ಕಾರನ್ನು ಕೂಡಾ ವಶಪಡಿಸಿಕೊಳ್ಳಲಾಗಿದೆ. ಬಿಜೆಪಿ ಚಿಹ್ನೆ ಇರುವ ಕಾರೊಂದನ್ನು ವ್ಯಕ್ತಿಯೊಬ್ಬನ ಮೇಲೆ ಚಲಾಯಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಗಾಝಿಯಾಬಾದ್‌ನ ಮಹಾಗುಣಪುರಂ ನಿವಾಸಿಯಾಗಿರುವ ಆರೋಪಿ ಸೌರಭ್ ಶರ್ಮಾ ಎಂಬಾತ ತನ್ನ ಸ್ನೇಹಿತನ ಕಾರನ್ನು ಚಲಾಯಿಸಿಕೊಂಡು ಹೋಗುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಕವಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

“ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ವೈರಲ್ ಆಗಿದ್ದು, ಅದರಲ್ಲಿ ರಸ್ತೆಯಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬರ ಮೇಲೆ ಕಾರು ಢಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಆ ವ್ಯಕ್ತಿ ಸಾವನ್ನಪ್ಪಿದ್ದಾರೆ. ಪೋಲೀಸರ ದೂರಿನ ಮೇರೆಗೆ ನರಹತ್ಯೆ ಪ್ರಕರಣ ದಾಖಲಾಗಿರುತ್ತದೆ. ಮೃತರ ಗುರುತು ಇನ್ನೂ ಪತ್ತೆಯಾಗಿಲ್ಲ. ಆರೋಪಿ ಚಾಲಕನನ್ನು ಬಂಧಿಸಿ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ” ಎಂದು ಗಾಝಿಯಾಬಾದ್‌ನ ಕವಿನಗರ ಎಸಿಪಿ ಅಭಿಷೇಕ್ ಶ್ರೀವಾಸ್ತವ ತಿಳಿಸಿದ್ದಾರೆ.

ಮಂಗಳವಾರ ರಾತ್ರಿ ಈ ಘಟನೆ ನಡೆದಿದ್ದು, ಈ ವೇಳೆ ಸ್ಥಳದಲ್ಲಿದ್ದ ಯಾರೋ ಘಟನೆಯ ವಿಡಿಯೋ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News