ಭಾರತೀಯ ಕ್ರಿಮಿನಲ್ ಕಾನೂನುಗಳ ಸಂಪೂರ್ಣ ಕೂಲಂಕುಷ ತಿದ್ದುಪಡಿಗಾಗಿ ಕೇಂದ್ರ ಸರಕಾರ ಮಸೂದೆ ಮಂಡನೆ
Photo: Sansad TV
ಹೊಸದಿಲ್ಲಿ: ವಸಾಹತುಶಾಹಿ ಕಾಲದ ಭಾರತೀಯ ಕ್ರಿಮಿನಲ್ ಕಾನೂನುಗಳ ಸಂಪೂರ್ಣ ಕೂಲಂಕುಷ ತಿದ್ದುಪಡಿಗಾಗಿ ಸರಕಾರ ಮಸೂದೆಯನ್ನು ಶುಕ್ರವಾರ ಮಂಡಿಸಿದೆ.
ಭಾರತೀಯ ದಂಡ ಸಂಹಿತೆ, ಕ್ರಿಮಿನಲ್ ಪ್ರಕ್ರಿಯಾ ಸಂಹಿತೆ ಹಾಗೂ ಭಾರತೀಯ ಸಾಕ್ಷ್ಯ ಕಾಯಿದೆಗಳ ಹೆಸರನ್ನು ಬದಲಾಯಿಸಲಾಗುತ್ತದೆ.
ಭಾರತೀಯ ದಂಡ ಸಂಹಿತೆಯನ್ನು ಭಾರತೀಯ ನ್ಯಾಯ ಸಂಹಿತಾ, ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯನ್ನು ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ ಹಾಗೂ ಭಾರತೀಯ ಸಾಕ್ಷ್ಯ ಕಾಯಿದೆಯನ್ನು ಭಾರತೀಯ ಸಾಕ್ಷ್ಯ ಎಂದು ಬದಲಿಸಲಾಗುತ್ತದೆ.
ಭಾರತೀಯ ನ್ಯಾಯ ಸಂಹಿತಾ 2023, ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ 2023, ಮತ್ತು ಭಾರತೀಯ ಸಾಕ್ಷಿ ಮಸೂದೆ 2023 ಅನ್ನು ಹೆಚ್ಚಿನ ಪರಿಶೀಲನೆಗಾಗಿ ಸಂಸದೀಯ ಸಮಿತಿಗೆ ಕಳುಹಿಸಲಾಗುವುದು ಎಂದು ಶಾ ಹೇಳಿದರು.
ಹೊಸ ಮಸೂದೆಯು ಮಹಿಳೆಯರು ಮತ್ತು ಮಕ್ಕಳ ವಿರುದ್ಧದ ಅಪರಾಧಗಳು, ಕೊಲೆಗಳು ಮತ್ತು "ರಾಜ್ಯದ ವಿರುದ್ಧದ ಅಪರಾಧಗಳ" ಕಾನೂನುಗಳಿಗೆ ಆದ್ಯತೆ ನೀಡುತ್ತದೆ.
ಹೊಸ ಮಸೂದೆಗಳೊಂದಿಗೆ ಸರಕಾರವು "ನ್ಯಾಯವನ್ನು ಖಾತ್ರಿಪಡಿಸುವ ಗುರಿಯನ್ನು ಹೊಂದಿದೆ, ಶಿಕ್ಷೆಯಲ್ಲ" ಎಂದು ಲೋಕಸಭೆಯಲ್ಲಿ ಮಸೂದೆ ಮಂಡಿಸಿದ ಅಮಿತ್ ಶಾ ಹೇಳಿದರು.