×
Ad

ವಾರ್ಷಿಕವಾಗಿ 66.7 ಮಿಲಿಯ ಟನ್ ಎನ್‌ಎನ್‌ಜಿ ಆಮದಿಗೆ ಕೇಂದ್ರ ಯೋಜನೆ

Update: 2025-09-02 20:34 IST

PC : LNG \ X

ಹೊಸದಿಲ್ಲಿ,ಸೆ.2: 2030ನೇ ಇಸವಿಯೊಳಗೆ ಭಾರತವು, ಪ್ರತಿ ವರ್ಷ 66.7 ದಶಲಕ್ಷ ಟನ್ ದ್ರವೀಕೃತ ನೈಸರ್ಗಿಕ ಅನಿಲ (ಎಲ್‌ಎನ್‌ಜಿ)ವನ್ನು ಆಮದು ಮಾಡಿಕೊಳ್ಳುವ ಯೋಜನೆಯನ್ನು ಹೊಂದಿದ್ದು,ಶೇ. 27ರಷ್ಟು ಹೆಚ್ಚಿಸಲಿದೆ ಮತ್ತು ಎರಡು ಎಲ್‌ಎನ್‌ಜಿ ಟರ್ಮಿನಲ್‌ ಗಳನ್ನು ಹೊಸದಾಗಿ ನಿರ್ಮಿಸಲಿದೆ ಎಂದು ಕೇಂದ್ರ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಸಚಿವ ಹರದೀಪ್ ಸಿಂಗ್ ಪುರಿ ಅವರು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.

ಪ್ರಸಕ್ತ, ಭಾರತವು ಎಂಟು ಎಲ್‌ಎನ್‌ಜಿ ಟರ್ಮಿನಲ್‌ಗಳನ್ನು ಹೊಂದಿದ್ದು, ವಾರ್ಷಿಕವಾಗಿ ಒಟ್ಟು 52.7 ದಶಲಕ್ಷ ಟನ್ ನೈಸರ್ಗಿಕ ಅನಿಲ ಸಂಗ್ರಹ ಹಾಗೂ ಸಂಸ್ಕರಣಾ ಸಾಮರ್ಥ್ಯವನ್ನು ಹೊಂದಿದೆ.

ಅಂಗಾರಾಮ್ಲ (ಕಾರ್ಬನ್ ಡೈ ಆಕ್ಸೈಡ್)ದ ಹೊರಸೂಸುವಿಕೆಯ ಈಗಿರುವ ಶೇ.6ರ ಪ್ರಮಾಣಕ್ಕಿಂತ ಕಡಿಮೆಗೊಳಿಸುವುದಕ್ಕಾಗಿ ಭಾರತವು 2030ರೊಳಗೆ ತನ್ನ ಇಂಧನ ಸಂಗ್ರಹದಲ್ಲಿ ನೈಸರ್ಗಿಕ ಅನಿಲದ ಪಾಲನ್ನು ಹೆಚ್ಚಿಸುವ ಉದ್ದೇಶವನ್ನು ಹೊಂದಿದೆ.

ಪ್ರಸಕ್ತ ದೇಶದಲ್ಲಿ 13 ಎಲ್‌ಎನ್‌ಜಿ ವಿತರಣಾ ಸ್ಥಾವರಗಳು ಕಾರ್ಯನಿರ್ವಹಿಸುತ್ತಿದ್ದು, ಡಿಸೆಂಬರ್ ತಿಂಗಳೊಳಗೆ ಅವುಗಳ ಸಂಖ್ಯೆಯನ್ನು 49ಕ್ಕೆ ಹೆಚ್ಚಿಸಲಾಗುವುದು ಎಂದವರು ಹೇಳಿದರು.

2070ರೊಳಗೆ ಭಾರತವನ್ನು ಸಂಪೂರ್ಣವಾಗಿ ಆಂಗಾರಾಮ್ಲ ಮುಕ್ತ ದೇಶವನ್ನಾಗಿಸುವ ಗುರಿಯನ್ನು ಹೊಂದಲಾಗಿದೆ. ವಾಹನಗಳಿಗಾಗಿ ಎಲ್‌ಎನ್‌ಐ ವಿತರಣಾ ನಿಲ್ದಾಣಗಳ ಸಂಖ್ಯೆಯನ್ನು 1 ಸಾವಿರಕ್ಕೆ ಏರಿಸಲಾಗುವುದೆಂದು ಪುರಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News