ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್‌ಗೆ ‘ಝೆಡ್' ಶ್ರೇಣಿಯ ಭದ್ರತೆ
Update: 2024-04-09 15:54 IST
Photo: PTI
ಹೊಸದಿಲ್ಲಿ: ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರಿಗೆ ಕೇಂದ್ರ ಸರಕಾರವು ‘ಝೆಡ್' ಶ್ರೇಣಿಯ ಭದ್ರತೆ ಒದಗಿಸಿದೆ.
ಲೋಕಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿಯಿರುವಾಗ ರಾಜೀವ್ ಕುಮಾರ್ ಅವರ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಗುಪ್ತಚರ ವರದಿಯ ಆಧಾರದ ಮೇಲೆ ಮುಖ್ಯ ಚುನಾವಣಾ ಆಯುಕ್ತರಿಗೆ ‘ಝೆಡ್' ಶ್ರೇಣಿಯ ಭದ್ರತೆಯನ್ನು ಗೃಹ ಸಚಿವಾಲಯ ಒದಗಿಸಿದೆ ಎಂದು ವರದಿಯಾಗಿದೆ.