ಚೆಕ್ ಬೌನ್ಸ್ ಪ್ರಕರಣ : ನಿರ್ಮಾಪಕ ರಾಜ್ ಕುಮಾರ್ ಸಂತೋಷಿಗೆ ಜಾಮೀನು
Update: 2024-02-18 21:20 IST
ಮುಂಬೈ: ಚೆಕ್ ಬೌನ್ಸ್ ಪ್ರಕರಣದಲ್ಲಿ ಬಾಲಿವುಡ್ ನಿರ್ಮಾಪಕ ರಾಜಕುಮಾರ ಸಂತೋಷಿ ಅವರಿಗೆ ಜಾಮೀನು ಮಂಜೂರು ಮಾಡಿರುವ ಗುಜರಾತಿನ ಜಾಮನಗರ ನ್ಯಾಯಾಲಯವು ತನ್ನ ತೀರ್ಪಿಗೆ 30 ದಿನಗಳ ತಡೆಯಾಜ್ಞೆಯನ್ನು ನೀಡಿದೆ. ಸಂತೋಷಿ ಪರ ವಕೀಲ ಬಿನೇಶ್ ಪಟೇಲ್ ಅವರು ರವಿವಾರ ಇದನ್ನು ದೃಢಪಡಿಸಿದರು.
ಜಾಮನಗರದ್ ಕೈಗಾರಿಕೋದ್ಯಮಿ ಅಶೋಕ ಲಾಲ್ರಿಂದ ಪಡೆದಿದ್ದ ಹಣವನ್ನು ಮರಳಿಸಲು ಸಂತೋಷಿ ಚೆಕ್ ಗಳನ್ನು ನೀಡಿದ್ದು,ಅವು ಬ್ಯಾಂಕ್ ನಲ್ಲಿ ಹಣವಿಲ್ಲದ್ದರಿಂದ ನಗದಾಗಿರಲಿಲ್ಲ. ಶನಿವಾರ ಪ್ರಕರಣದ ತೀರ್ಪು ನೀಡಿದ್ದ ನ್ಯಾಯಾಲಯವು ಸಂತೋಷಿ ಅವರಿಗೆ ಎರಡು ವರ್ಷಗಳ ಜೈಲುಶಿಕ್ಷೆಯನ್ನು ವಿಧಿಸಿತ್ತು ಮತ್ತು ಚೆಕ್ ನ ಇಮ್ಮಡಿ ಮೊತ್ತವನ್ನು ಲಾಲ್ ಗೆ ಮರಳಿಸುವಂತೆ ಆದೇಶಿಸಿತ್ತು.
ತೀರ್ಪಿನ ವಿರುದ್ಧ ಮೇಲ್ಮವಿಯನ್ನು ಸಲ್ಲಿಸಲು 30 ದಿನಗಳ ಕಾಲಾವಕಾಶವನ್ನು ಕೋರಿ ಸಂತೋಷಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯವು ಪುರಸ್ಕರಿಸಿದೆ ಎಂದು ಪಟೇಲ್ ತಿಳಿಸಿದರು.