×
Ad

IIDEA 2026ರ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳಲಿರುವ ಭಾರತದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್

Update: 2025-11-27 09:44 IST

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ 

ಹೊಸದಿಲ್ಲಿ: ಭಾರತದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಡಿ.3ರಂದು ಸ್ಟಾಕ್‌ಹೋಮ್‌ನಲ್ಲಿ ನಡೆಯುವ ಸದಸ್ಯ ರಾಷ್ಟ್ರಗಳ ಸಭೆಯಲ್ಲಿ International Institute for Democracy and Electoral Assistance (IIDEA) 2026ರ ಅಧ್ಯಕ್ಷತೆಯನ್ನು ಅಧಿಕೃತವಾಗಿ ವಹಿಸಿಕೊಳ್ಳಲಿದ್ದಾರೆ.

ಈ ಕುರಿತು ಪ್ರಕಟನೆ ನೀಡಿರುವ ಚುನಾವಣಾ ಆಯೋಗವು, “ಭಾರತದ ಚುನಾವಣಾ ಆಯೋಗವನ್ನು ಜಾಗತಿಕ ಮಟ್ಟದಲ್ಲಿ ಅತ್ಯಂತ ವಿಶ್ವಾಸಾರ್ಹ ಮತ್ತು ನವೀನ ಚುನಾವಣಾ ನಿರ್ವಹಣಾ ಸಂಸ್ಥೆಗಳ ಪೈಕಿ ಒಂದಾಗಿ ಗುರುತಿಸುವ ಮಹತ್ವದ ಮನ್ನಣೆ” ಎಂದು ತಿಳಿಸಿದೆ.

ಪ್ರಜಾಪ್ರಭುತ್ವದ ಬಲವರ್ಧನೆಗಾಗಿ 1995ರಲ್ಲಿ ರಚಿಸಲ್ಪಟ್ಟ IIDEA, ಭಾರತ ಸೇರಿದಂತೆ 35 ಸದಸ್ಯ ರಾಷ್ಟ್ರಗಳನ್ನು ಒಳಗೊಂಡ ವೇದಿಕೆಯಾಗಿದೆ. ಅಮೆರಿಕ ಮತ್ತು ಜಪಾನ್‌ ವೀಕ್ಷಕ ರಾಷ್ಟ್ರಗಳಾಗಿ ಸಂಸ್ಥೆಯಲ್ಲಿ ಪಾಲ್ಗೊಳ್ಳುತ್ತಿವೆ. ಪ್ರಸ್ತುತ ಅಧ್ಯಕ್ಷತೆಯನ್ನು ವಹಿಸಿಕೊಂಡಿರುವ ಸ್ವಿಟ್ಜರ್ಲೆಂಡ್‌ ಅದನ್ನು ಇದೀಗ ಭಾರತಕ್ಕೆ ಹಸ್ತಾಂತರಿಸಲಿದೆ.

ಅಧ್ಯಕ್ಷರಾಗಿ ಜ್ಞಾನೇಶ್ ಕುಮಾರ್ ಅವರು 2026ರವರೆಗೆ ನಡೆಯುವ ಎಲ್ಲಾ ಕೌನ್ಸಿಲ್ ಸಭೆಗಳಿಗೆ ನೇತೃತ್ವ ವಹಿಸಲಿದ್ದಾರೆ. “ವಿಶ್ವದ ಅತಿದೊಡ್ಡ ಚುನಾವಣೆಯನ್ನು ನಿರ್ವಹಿಸಿದ ಭಾರತದ ಅನುಭವವನ್ನು IIDEA ಯ ಜಾಗತಿಕ ಕಾರ್ಯಸೂಚಿಯನ್ನು ರೂಪಿಸಲು ಬಳಸಿಕೊಳ್ಳಲಾಗುವುದು” ಎಂದು ಆಯೋಗ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News