ಬಡಕಕ್ಷಿದಾರರಿಗಾಗಿ ಮಧ್ಯರಾತ್ರಿ ತನಕವೂ ಕೋರ್ಟ್‌ನಲ್ಲೇ ಇರಲು ಸಿದ್ಧ: ಸಿಜೆಐ ಸೂರ್ಯಕಾಂತ್
ಸಿಜೆಐ ಶ್ರೀಕಾಂತ್ | Photo Credit : PTI
ಹೊಸದಿಲ್ಲಿ,ನ.28: ಬಡ ಕಕ್ಷಿದಾರರಿಗೆ ನ್ಯಾಯದಾನವನ್ನು ಖಾತರಿಪಡಿಸಲು ನ್ಯಾಯಾಲಯದಲ್ಲಿ ಮಧ್ಯರಾತ್ರಿಯವರೆಗೂ ಕುಳಿತುಕೊಳ್ಳಲು ಸಿದ್ಧನಿದ್ದೇನೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯಕಾಂತ್ ಶುಕ್ರವಾರ ತಿಳಿಸಿದ್ದಾರೆ.
ಕೇಂದ್ರ ಸರಕಾರ ಹಾಗೂ ಇತರರ ವಿರುದ್ಧ ತಿಲಕ್ ಸಿಂಗ್ ಡಾಂಗಿ ಎಂಬವರು ಸಲ್ಲಿಸಿದ ಅರ್ಜಿಯನ್ನು ತಳ್ಳಿಹಾಕಿದ ಸಂದರ್ಭ, ನ್ಯಾ.ಸೂರ್ಯಕಾಂತ್ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಶ್ರೀಮಂತ ಕಕ್ಷಿದಾರರು ದಾಖಲಿಸುವ ಐಶಾರಾಮಿ ವಿಷಯಗಳ ಕುರಿತ ಮೊದ್ದಮೆಗಳು ನನ್ನ ಮುಂದೆ ಬರುವುದಿಲ್ಲ ಎಂದು ಜಯ್‌ಮಾಲಾ ಬಾಗ್ಚಿ ಅವರನ್ನೊಳಗೊಂಡ ನ್ಯಾಯಪೀಠದ ನೇತೃತ್ವ ವಹಿಸಿದ್ದ ಸೂರ್ಯಕಾಂತ್ ಹೇಳಿದರು.
‘‘ನಿಮಗೆ ಒಂದು ವಿಷಯ ಹೇಳಲು ನಾನು ಬಯಸುವೆ. ನಾನು ಅತ್ಯಂತ ದುರ್ಬಲರಿಗಾಗಿ, ಬಡಕಕ್ಷಿದಾರರಿಗಾಗಿ ಇಲ್ಲಿದ್ದೇನೆ. ಒಂದು ವೇಳೆ ಅಗತ್ಯ ಬಿದ್ದರೆ ನಾನು ಅವರಿಗಾಗಿ ಮಧ್ಯರಾತ್ರಿಯವರೆಗೂ ವಿಚಾರಣೆಗಾಗಿ ನ್ಯಾಯಾಲಯದಲ್ಲಿ ಕುಳಿತುಕೊಳ್ಳುವೆ ’’ಎಂದು ಅವರು ಹೇಳಿದ್ದಾರೆ.
ಹರ್ಯಾಣದ ಹಿಸಾರ್ ಜಿಲ್ಲೆಯ ಮಧ್ಯಮವರ್ಗದ ಕುಟುಂಬದಿಂದ ಬಂದಿರುವ ನ್ಯಾಯಮೂರ್ತಿ ಸೂರ್ಯಕಾಂತ್ ಅವರು ಭಾರತದ 53ನೇ ಮುಖ್ಯ ನ್ಯಾಯಮೂರ್ತಿಯಾಗಿ ನ. 24ರಂದು ಅಧಿಕಾರ ಸ್ವೀಕರಿಸಿದ್ದರು.